ಪಂಪ್‌ಸೆಟ್‌ಗೆ ಏಳು ತಾಸು ವಿದ್ಯುತ್ ನೀಡಲು ಮುಂದಾದ ಇಂಧನ ಸಚಿವ ಕೆ.ಜೆ.ಜಾರ್ಜ್ ನಿರ್ಧಾರ ಸ್ವಾಗತಾರ್ಹ : ಶಾಸಕ ಜೆ.ಎನ್.ಗಣೇಶ್
ಕಂಪ್ಲಿ 24: ಕಂಪ್ಲಿ ಕ್ಷೇತ್ರದ ಪಂಪ್‌ಸೆಟ್ ಆಧರಿತ ರೈತರಿಗೆ ಸತತ ಏಳು ತಾಸು ವಿದ್ಯುತ್ ಸರಬರಾಜು ಮಾಡುವ ಕೋರಿಕೆಯಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪಂಪ್‌ಸೆಟ್‌ಗಳಿಗೆ ಸತತ ಏಳು ತಾಸು ವಿದ್ಯುತ್ ಸರಬರಾಜು ಮಾಡುವುದಾಗಿ ತಿಳಿಸಿದ್ದು, ಇದರಿಂದ ರೈತರಲ್ಲಿ ಸಂತಸ ಮೂಡುವ ಜೊತೆಗೆ ಈ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಅವರು ಪಟ್ಟಣದ ಶಾಸಕರ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರೈತರ ಐಪಿ ಸೆಟ್‌ಗಳಿಗೆ ಆರು ತಾಸು ವಿದ್ಯುತ್ ನೀಡಲಾಗುತ್ತಿತ್ತು. ಈ ಬಾರಿ ಮಳೆ ಇಲ್ಲದ ಪರಿಣಾಮ ನೀರಿನ ಸಮಸ್ಯೆಯಾಗುತ್ತಿದೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಸತತ ಏಳು ತಾಸು ಐಪಿಸೆಟ್‌ಗೆ ವಿದ್ಯುತ್ ನೀಡಬೇಕೆಂಬ ಒತ್ತಾಯ ರೈತರದ್ದಾಗಿತ್ತು. ಅದರಂತೆ ಇಂಧನ ಸಚಿವರಿಗೆ ಮನವಿ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆಯಿಂದಲೇ ರೈತರ ಐಪಿ ಸೆಟ್‌ಗಳಿಗೆ ವಿದ್ಯುತ್ ಕೊಡಲಿಕ್ಕೆ ಒಪ್ಪಿಗೆ ನೀಡಿರುವುದು ತಿಳಿದಿದೆ. ಇದರಿಂದ ರೈತರಿಗೆ ಒಳ್ಳೆಯದಾಗಲಿದೆ. ಮತ್ತು ಈ ನಿರ್ಧಾರದಿಂದ ರೈತರಲ್ಲಿ ಖುಷಿ ತಂದಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ಮಳೆಯಾದರೆ, ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಲಿದೆ. ರೈತರು ಸಮೃದ್ಧಿಯಾಗದರೆ, ನಾಡೆಲ್ಲಾ ಸಮೃದ್ಧಿಯಾಗಲಿದೆ ಎಂದರು.
ಪೋಟೋ: ಶಾಸಕ ಜೆ.ಎನ್.ಗಣೇಶ್.