ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಆಧ್ಯತೆ ನೀಡಿ : ಹೊಸಕೋಟೆ ಜಗದೀಶ
ಲೋಕದರ್ಶನ ವರದಿ
ಕಂಪ್ಲಿ 17: ಇತ್ತೀಚಿನ ದಿನಮಾನದಲ್ಲಿ ಗ್ರಾಮೀಣ ಕ್ರೀಡೆಗಳು ನಸಿಸುತ್ತಿದ್ದು, ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳ ಕಡೆಗೆ ಯುವಕರು ಹೆಚ್ಚಿನ ಆಧ್ಯತೆ ನೀಡಬೇಕು ಎಂದು ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಹೇಳಿದರು. ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಕಾಲೇಜು ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ ಗಂಡುಗಲಿಕುಮಾರ ಸೀಜನ್-2ರ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಲಿವೆ.
ಮತ್ತು ಪ್ರತಿಯೊಂದು ಹಂತದಲ್ಲಿ ಕ್ರೀಡೆಗಳನ್ನು ಮೈಗೂಡಿಸಿಕೊಂಡಾಗ ಆರೋಗ್ಯ ವೃದ್ಧಿಸುವ ಜೊತೆಗೆ ಯುವ ಪ್ರತಿಭೆಗಳ ಅನಾವರಣಕ್ಕೆ ಮುಖ್ಯ ವೇದಿಕೆಯಾಗಿದೆ. ಇಂತಹ ಪಂದ್ಯಾವಳಿಯಲ್ಲಿ ಯುವಕರು ಹೆಚ್ಚು ಹೆಚ್ಚು ಭಾಗವಹಿಸಿ, ಕ್ರೀಡಾಸ್ಪೂರ್ತಿ ಮೆರೆಯುವ ಜೊತೆಗೆ ಸಾಧನೆಯೊಂದಿಗೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಲು ಅವಕಾಶಗಳು ದೊರೆಯಲಿ ಎಂದರು. ನಂತರ ಮೊದಲ ಪಂದ್ಯಾಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ 30 ಸಾವಿರ ಮತ್ತು ಎರಡನೇ ಸ್ಥಾನದ ತಂಡಕ್ಕೆ ದ್ವಿತೀಯ ಬಹುಮಾನ 10 ಸಾವಿರ ಆಕರ್ಷಕ ಕಪ್ ದೊರಯಲಿದೆ. ಇಲ್ಲಿನ ಕ್ರಿಕೆಟ್ನಲ್ಲಿ 10 ತಂಡಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಯೋಜಕರಾದ ಬಿ.ನೂರ್ ಮುಕ್ತಾರ್ ಹಾಗೂ ಹೈಸ್ಕೂಲ್ ತಂಡ ಹಾಗೂ ಪ್ರಾಯೋಜಕರಾದ ವಾಬ್ಪೇ(ಇಮ್ರಾನ್), ಸ್ಕೈಲ್ಯಾಂಡ್ ರಿಯಾಲಿಟಿ(ಅಫ್ರೀದಿ), ಗೋಲ್ಡನ್ ಟೈಗರ್ ಚಾಯ್(ಕಲೀಲ್), ಬನಸೂರಿ ಅಗರ್ ಬತ್ತಿ(ರಾಮಸಾಗರ ಅನಿಲ), ಮಹೇಶ(ಕರಡಿ) ಸೇರಿದಂತೆ ಕ್ರೀಡಾಪಟುಗಳು ಇದ್ದರು.