ಅ.20ರತನಕ ಎಚ್ಎಲ್ಸಿ ನಾಲೆಗೆ ನೀರು ಹರಿಯಲಿದೆ : ಶಾಸಕ ಜೆ.ಎನ್.ಗಣೇಶ್
ಕಂಪ್ಲಿ 14: ರೈತರ ಬೆಳೆಗಳಿಗೆ ಸಮರ್ಕವಾಗಿ ನೀರೊದಗಿಸಲು ಸಂಬಂಧಪಟ್ಟ ನೀರಾವರಿ ಸಚಿವರೊಂದಿಗೆ ಮಾತನಾಡಿದ್ದು, ಅ.20ರತನಕ ಎಚ್ಎಲ್ಸಿ ಕಾಲುವೆಗೆ ನೀರು ಹರಿಯಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ರೈತರ ಪರವಾಗಿ ಶಕ್ತಿಮೀರಿ ಕೆಲಸ ಮಾಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದ್ದಾರೆ. ಎಚ್ಎಲ್ಸಿ ಭಾಗಕ್ಕೆ ನೀರು ಕಡಿತಗೊಳಿಸಲಾಗಿದೆಂದು ಅಂತರ್ಜಾಲದಲ್ಲಿ ವಿಡಿಯೋ ಹರಿಬಿಡಲಾಗಿದ್ದು, ಇದರಲ್ಲಿ ರೈತರು ಆತಂಕಪಡುವ ಅಗತ್ಯತೆ ಇಲ್ಲ. ಡಿ.15ವರೆಗೆ ಮೆಣಸಿನಕಾಯಿ ಬೆಳೆಗೆ ನೀರು ಬಿಡುವಂತೆ ರೈತರು ಮನವಿ ಮಾಡಿದ್ದು, ಜಲಾಶಯದಲ್ಲಿ ನೀರು ಎಲ್ಲಿತನಕ ಇರುತ್ತದೋ ಅಲ್ಲಿತನಕ ರೈತರಿಗೆ ನೀರು ಕೊಡಿಸುವ ಕೆಲಸ ಮಾಡಲಾಗುವುದು. ರೈತರು ಸಹಕರಿಸಿದರೆ, ಪ್ರತಿ ಹಂತದಲ್ಲಿ ಅವರ ಜೊತೆಗಿದ್ದು, ನೀರು ಸಮರ್ಕವಾಗಿ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅ.20ರ ನಂತರ ಸಭೆಯಲ್ಲಿ ನೀರು ಬಿಡುವ ಸಂಬಂಧ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.