ಇಂಡಿ

ಹಂಜಗಿ ಕೆರೆಗೆ ಕೂಡಲೇ ನೀರು ಹರಿಸಿ: ಬಿ.ಡಿ. ಪಾಟೀಲ ಆಗ್ರಹ

ಹಂಜಗಿ ಕೆರೆಗೆ ಕೂಡಲೇ ನೀರು ಹರಿಸಿ: ಬಿ.ಡಿ. ಪಾಟೀಲ ಆಗ್ರಹ

ಲೋಕದರ್ಶನ ವರದಿ 

 ಇಂಡಿ 14 : ಸುಮಾರು 32 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಂಜಗಿ ಕೆರೆಯಲ್ಲಿ ನೀರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ತಿಡಗುಂದಿ ಬ್ರಾಂಚ್ ಕಾಲುವೆಯಿಂದ ಕೂಡಲೇ ಹಂಜಗಿ ಕೆರೆಗೆ ನೀರು ಹರಿಸಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಆಗ್ರಹಿಸಿದರು.ಹಂಜಗಿ, ಚೌಡಿಹಾಳ, ಚಿಕ್ಕಬೇವನೂರ, ಅಂಜುಟಗಿ ಹಾಗೂ ಹಿರೇ ಇಂಡಿ ಗ್ರಾಮಗಳ ರೈತರ ಪರವಾಗಿ ಇಂಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೆರೆಗೆ ನೀರು ಹರಿಸುವಲ್ಲಿ ವಿಳಂಬವಾದರೆ ಉಂಟಾಗುವ ಅನಾಹುತಗಳಿಗೆ ಸಂಬಂಧಿಸಿದ ಇಲಾಖೆಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ವೇ. ಪಿಂಟುಸ್ವಾಮಿ ಹಿರೇಮಠ, ಎಸ್‌.ಎನ್‌. ಪಾಯಕರ, ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ರೈತ ಸಂಘದ ಅಧ್ಯಕ್ಷ ಭೀಮರಾಯ ಪೂಜಾರಿ, ಗೋವಿಂದಗೌಡ ಬಿರಾದಾರ, ದುಂಡು ಬಿರಾದಾರ, ಮಾಳಪ್ಪ ಪೂಜಾರಿ, ಬಾಬು ಮೇತ್ರಿ, ಮಹಾದೇವ ಕೂಟಲಗಿ, ಬಸನಗೌಡ ಬಿರಾದಾರ, ಮುತ್ತು ಪಾಯಕರ, ಶಿವಾನಂದ ಮುರಗುಂಡಿ, ಶಿವಾನಂದ ಹಂಜಗಿ, ಶಿವಯ್ಯ ಹಿರೇಮಠ , ನಿಯಾಝ್ ಅಗರಖೇಡ,ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ