ಇಂಡಿ

ನಾಡದೇವಿ ಉತ್ಸವ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ

ನಾಡದೇವಿ ಉತ್ಸವ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ

ಲೋಕದರ್ಶನ ವರದಿ 

 ಇಂಡಿ 14 : ತಾಲ್ಲೂಕಿನ ತಾಂಬಾ ಗ್ರಾಮದ ನಾಡದೇವಿ ನವರಾತ್ರಿ ಉತ್ಸವ ಮತ್ತು ಜಾತ್ರೆಗಳು ಮನಸ್ಸಿಗೆ ಶಾಂತಿ,ನೆಮ್ಮದಿ, ಸುಖ, ಸಮೃದ್ಧಿ ನೀಡುತವೆ’ ಎಂದು ಕಾಂಗ್ರೆಸ್ ಮುಖಂಡ ಅಪ್ಪಣ್ಣ ಕಲ್ಲೂರ ಹೇಳಿದರು.ಗ್ರಾಮದ ಅಂಬಾಭವಾನಿ ಎಜುಕೇಶನ್ ಟ್ರಸ್ಟ್‌ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘ. ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಬಕ್ತರ ಸಹಯೋಗದೊಂದಿಗೆ ನಡೆದ ನಾಡದೇವಿ ನವರಾತ್ರಿ ಉತ್ಸವದ ಪ್ರಯುತ್ತ ಏರಿ​‍್ಡಸಿದ ರಾಜ್ಯ ಮಟ್ಟದ ಪುರುಷರ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಭಾಗದಲ್ಲಿ ಅನೇಕ ಸಂತ ಶರಣರು ಹುಟ್ಟಿ ಈ ನಾಡು ಸಂಪೂರ್ಣ ಪುಣ್ಯದ ನಾಡಾಗಿ ಮಾರ​‍್ಪಟಟಿದೆ. ನಮ್ಮ ಗ್ರಾಮೀಣ ಭಾಗದಲ್ಲಿ  ಮಾಜಿ ಶಾಸಕ ದೇವಾನಂದ ಚವ್ಹಾಣ ಮತ್ತು ಸಮಾಜ ಸೇವಕ ರವಿಕುಮಾರ  ಚವ್ಹಾಣ ಅವರು ಎಲ್ಲ ಜನರನ್ನು ಒಂದಡೆ ಸೇರಿಸಿ ನಾಡದೇವಿ  ನವರಾತ್ರಿ ಉತ್ಸವ ಆಚರಿಸುವುದರಿಂದ ಜಾತ್ಯತೀತ ಮನೋಭಾವನೆ ಮತ್ತು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಮಾಜದಲ್ಲಿ ಬದುಕು ಸಾಗಿಸಲು ಅನುಕೂವಾಗಿವೆ. ಇಂದು ಗ್ರಾಮೀಣ ಭಾಗದಲ್ಲಿ ಅನೇಕ ಸಮುದಾಯಗಳು ಕಷ್ಟ ಸುಖ ಎರಡನ್ನು ಸಮಾನವಾಗಿ ಹಂಚಿಕೊಂಡು ಗೌರವಯುತವಾಗಿ ಬದುಕುತ್ತಿವೆ. ಇಂತಹ ಧಾರ್ಮಿಕ ಆಚರಣೆಗಳು ಪ್ರತಿಯೊಂದು ಗ್ರಾಮದಲ್ಲಿ ಪಸರಿಸಲಿ ಮತ್ತು ಜಗನ್ಮಾದೆ ಆದಿಶಕ್ತಿ ದೇವಿ ರೈತರ ಬಾಳಿಗೆ ಸುಖ ಶಾಂತಿಯನ್ನು ಮತ್ತು ಮುಂಬರುವ ದಿನಗಳಲ್ಲಿ ಮೇಘರಾಜನ ಕೃಪೆ ಕರುಣಿಸಲಿ ಎಂದು ಪ್ರಾರ್ಥನಿಸಿದರು.ಮಾಜಿ ಶಾಸಕ ದೇವಾನಂದ ಚವ್ಹಾಣ ಮತ್ತು ಸಮಾಜ ಸೇವಕ ರವಿಕುಮಾರ  ಚವ್ಹಾಣ, ಪ್ರಕಾಶ ದೊಡಮನಿ, ಜೆ.ಎಸ್‌.ಹತ್ತಳ್ಳಿ, ನಾಡದೇವಿ ಉತ್ಸವಸಮಿತಿ ಅಧಕ್ಷ ಅಭಿನವ ದೇವಾನಂದ ಚವ್ಹಾಣ ಮತ್ತು ಕಾರ್ಯದರ್ಶೀ ಪ್ರೀತಮ್ ರವಿಕುಮಾರ  ಚವ್ಹಾಣ ಪಾಲ್ಗೊಂಡಿದರು. 9ಕ್ಕೆ ಖ್ಯಾತ ಕಲಾವಿದರಾದ ಮ್ಯೂಜಿಕ ಮೈಲಾರಿ ತಂಡದವರಿಂದ ರಸಮಂಜರಿ ಈ ಕಾರ್ಯಕ್ರಮ ಜರಗಿತು. ಮಾಂತೇಶ ಭಾಗೆಳ್ಳಿ ಉದ್ಘಾಟಿಸಿದರು,  ಸಂತೋಷ ಪ್ಯಾಟಿ, ಸಿದ್ದು ಪಾಸೋಡಿ, ಸಂದೀಪ ಖ್ಯಾತಾ, ಪ್ರಜ್ವಲ ಭೈರಾಮಡಗಿ, ಸಂಗಮೇಶ ಪಾಟೀಲ, ಶ್ರೀಶೈಲ ನಂದರಗಿ, ಮಂಜುನಾಥ ಸೂರ್ಯವಂಶಿ ಪಾಲ್ಗೊಂಡಿದರು.ನಡೆದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ನಿರಂತರ ದಾಸೋಹ ಕೇದ್ರವನ್ನು ವಿಸ್ತರಿಸಿ ಬಂದ ಭಕ್ತರ ಜನಸಂಖ್ಯೆಗೆ ಅನುಗುಣವಾಗಿ ಬೃಹತ್ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಈ ದಾಸೋಹ ಕೇದ್ರದಲ್ಲಿ ಸಹಸ್ರಾರ ಭಕ್ತರು ಸಜ್ಜಕ, ಪ್ರಸಾದ ಸ್ವಿಕರಿಸಿ ಧನ್ಯತೆ ಮೆರದರು. 


ಸುದ್ದಿ ಓದಿ