ಇಂಡಿ

ಇಂಡಿ ತಾಲೂಕಿನ್ಯಾದಂತ ನವರಾತ್ರಿ ಉತ್ಸವ

ಇಂಡಿ ತಾಲೂಕಿನ್ಯಾದಂತ ನವರಾತ್ರಿ ಉತ್ಸವ


ಲೋಕದರ್ಶನ ವರದಿ  

ಇಂಡಿ 11:  ನವರಾತ್ರಿ ಹಾಗೂ ದಸರಾ ಉತ್ಸವದ ಅಂಗವಾಗಿ ಇಂಡಿ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಡದೇವಿ ಅಂಬಾಭವಾನಿ ದೇವಿಯ ಭವ್ಯ ಮೆರವಣಿಗೆಗಳು ಭಕ್ತಿಭಾವದಿಂದ ಜರುಗಿದವು.ಇಂಡಿ ನಗರದ ಭೀರ​‍್ಪ ನಗರದ ದುರ್ಗಾ ಪರಮೇಶ್ವರಿ ಉತ್ಸವ ಸಮಿತಿ, ಕುಂಬಾರ ಓಣಿಯ ಭುವನೇಶ್ವರಿ ಯುವಕ ಮಂಡಳಿ, ಹೂಗಾರ ಓಣಿಯ ಶ್ರೀ ಅಂಬಾಭವಾನಿ ಯುವಕ ಮಂಡಳಿ ಹಾಗೂ ಚಾವಡಿ ಓಣಿಯ ಶ್ರೀ ಅಂಬಾಭವಾನಿ ನವತರುಣ ಮಂಡಳಿ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಕ್ತರು ಆಯಿ ರಾಧಾ ಉಧೋ ಉಧೋ, ಅಂಬಾಭವಾನಿ ಉಧೋ ಉಧೋ ಎಂಬ ಘೋಷಣೆಗಳನ್ನು ಮೊಳಗಿಸಿದರು. ಡೊಳ್ಳು ಕುಣಿತ, ಬ್ಯಾಂಜೊ ಹಾಗೂ ಚಟ್ಟಲಗಿ ವಾದ್ಯಗಳ ಸದ್ದು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.ನಗರದ ವಿವಿಧ ಓಣಿಗಳಲ್ಲಿ ಆಕರ್ಷಕ ಅಲಂಕಾರಗಳನ್ನು ಮಾಡಲಾಗಿದ್ದು, ಒಂಬತ್ತು ದಿನಗಳ ಕಾಲ ದೇವಿಯ ಪೂಜೆ, ಆರತಿ, ಅಭಿಷೇಕ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  


ಸುದ್ದಿ ಓದಿ