ಇಂಡಿ

ರೈತರ ಉಪವಾಸ ಸತ್ಯಾಗ್ರಹಕ್ಕೆ ಸಿಕ್ಕ ಜಯ ತಡವಲಗಾ ಕೆರೆಗೆ ನೀರು

ರೈತರ ಉಪವಾಸ ಸತ್ಯಾಗ್ರಹಕ್ಕೆ ಸಿಕ್ಕ ಜಯ ತಡವಲಗಾ ಕೆರೆಗೆ ನೀರು

ಲೋಕದರ್ಶನ ವರದಿ 

 ಇಂಡಿ 08: ಭಾರತೀಯ ಕಿಸಾನ್ ಸಂಘದ  ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಅವರ ನೇತೃತ್ವದಲ್ಲಿ  ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ (ಜೋಡಗುಡಿಯ) ಹತ್ತಿರ ರೈತರು ರಸ್ತೆ ಬಂದ್ ಮಾಡಿ ಹಾಗೂ ಧರಣಿ ಸತ್ಯಾಗ್ರಹ ನಂತರ ಉಪವಾಸ ಸತ್ಯಾಗ್ರಹ ಮಾಡಿದರ ಮೂಲಕ ರಾಜ್ಯ ವ್ಯಾಪ್ತಿ ಸುದ್ದಿ ಆಗಿತ್ತು.

ಈ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರಾದ ಬಸವರಾಜ ಅವರನ್ನು ಕರೆದುಕೊಂಡು ಬಂದು ಉಪವಾಸ ಸತ್ಯಾಗ್ರಹ ನಿರಂತರನ್ನು ಮನವೊಲಿಸಿ ನಾನು ಕೇವಲ ಏಳು ದಿನಗಳ ಒಳಗಾಗಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆ ಸೇರಿದಂತೆ  ಇಂಡಿ ಹಾಗೂ ಚಡಚಣ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುತ್ತೆನೆ ಎಂದೂ ಭರವಸೆ ನೀಡಿದರು.

ಆದರೆ ಗುರುವಾರ ಬೆಳಗ್ಗೆಯಿಂದ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆ ಕೃಷ್ಣಾ ಮೇಲ್ದಂಡೆ ಯೋಜನೆಯ ತಿಡಗುಂದಿ ಬ್ಯ್ರಂಚ್ ಕಾಲುವೆ ಮುಖಾಂತರ ನೀರು ತಡವಲಗಾ ಕೆರೆಗೆ ನೀರು ಹರಿದು ಬರುತ್ತಿದ್ದನ್ನು ಕಂಡ ರೈತರು ಸಂತೋಷ ಭರಿತರಾಗಿ ಜೈಕಾರ ಹಾಕಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷರಾದ ಈರಣ್ಣ ಗೋಟ್ಯಾಳ ಸದಸ್ಯರಾದ  ಅಂಬಣ್ಣ ಪಂತೋಜಿ ದಶಗೀರ ಬಾಗವಾನ  ಶರಣಪ್ಪ ತಾರಾಪೂರ ಚಂದಪ್ಪ ಮಿರಗಿ ಶಾಂತಪ್ಪ ಖಸ್ಕಿ ಚನ್ನಪ್ಪ ಮಿರಗಿ ಮಳಸಿದ್ದಪ್ಪ ಖಸ್ಕಿ ಶರಣಪ್ಪ ಪಂತೋಜಿ  ಬಸವರಾಜ ಪಂತೋಜಿ ಶರಣಪ್ಪ ಸುಧಾಮ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ