ನವರಾತ್ರಿ ಅಂಗವಾಗಿ ಮುದ್ದೇಬಿಹಾಳದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ
ಮುದ್ದೇಬಿಹಾಳ 08 : ಪಟ್ಟಣದಲ್ಲಿ ನವಶಕ್ತಿಗಳ ದರ್ಶನ ಮಾಡಲು ನಮ್ಮ ನಡಿಗೆ ನವ ದುರ್ಗೆಯರ ಕಡೆಗೆ ( ದುರ್ಗಾ ದೌಡ) ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಅಂಗವಾಗಿ ಎರಡನೇ ಪೂರ್ವಭಾವಿ ಸಭೆ ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಬುಧುವಾರ ಸಾಯಂಕಾಲ ಜರುಗಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಲನ ಸಮಿತಿಯ ಶ್ರೀಮತಿ ಸಹನಾ ಬಡಿಗೇರ ,ಸ್ನೇಹಾ ನಲವಡೆ ಹಾಗೂ ವಾಸುದೇವ ಶಾಸ್ತ್ರೀ,ನೇತಾಜಿ ನಲವಡೆ, ಪುಟ್ಟು ಕುಲಕರ್ಣಿ , ಪರಶುರಾಮ ಪವಾರ ಉದಯಸಿಂಗ್ ರಾಯಚೂರು ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಥಮ ಬಾರಿಗೆ ನವರಾತ್ರಿ ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಎಲ್ಲಾ ಹಿಂದೂ ಸಮಾಜದ ಬಾಂಧವರು ಸೇರಿ ನವದುರ್ಗೆಯರ ಕಡೆಗೆ ನಮ್ಮ ನಡಿಗೆ( ದುರ್ಗಾ ದೌಡ) ಕಾರ್ಯಕ್ರಮ ಮಾಡಲಾಗುತ್ತಿದೆ.ನವರಾತ್ರಿ ಯ 6 ನೇಯ ದಿನ ಅಕ್ಟೋಬರ್ 16 ಶುಕ್ರವಾರ ಪಟ್ಟಣದ ಬನಶಂಕರಿ ದೇವಾಲಯದಿಂದ ಮದ್ಯಾಹ್ನ 3 ಗಂಟೆಗೆ ಪಟ್ಟಣದ ಎಲ್ಲಾ ಶಕ್ತಿದೇವತೆಗೆ ಮಂದಿರ ನಡಿಗೆಗೆ ಚಾಲನೆಯನ್ನು ನೀಡಲಾಗುತ್ತದೆ ಭವ್ಯ ಸಂಚಲನದಲ್ಲಿ ನವದುರ್ಗೆಯರ ಭವ್ಯ ಭಾವಚಿತ್ರವನ್ನು ಅಲಂಕೃತ ಸಾರೋಟದಲ್ಲಿಟ್ಟು ಮಾಡಲಾಗುತ್ತದೆ.
ಮೆರವಣಿಗೆ ಬನಶಂಕರಿ ದೇವಾಲಯದಿಂದ ಆರಂಭವಾಗಿ ಗ್ರಾಮದೇವತೆ ಕಟ್ಟೆ , ಸರಾಫ ಬಜಾರ್ ಮಾರ್ಗವಾಗಿ ಕಿಲ್ಲಾಗಲ್ಲಿಯ ಕಾಳಿಕಾದೇವಿ ಮಂದಿರ, ಕುಂಬಾರ ಓಣಿಯ ಗ್ರಾಮದೇವತೆ ಮಂದಿರ, ನೇತಾಜಿ ಗಲ್ಲಿಯ ದೇವಿಯರ ಮಂದಿರ, ಪುನಃ ಗ್ರಾಮದೇವತೆ ಕಟ್ಟೆ ದುರ್ಗಾದೇವಿ ಹಾಗೂ ಭವಾನಿ ದೇವಿ ದರ್ಶನ ಪೂಜೆ ಸಲ್ಲಿಸಿ ಬಸವೇಶ್ವರ ವೃತ್ತ ಮಾರ್ಗ ತಂಗಡಗಿ ರಸ್ತೆ ಲಕ್ಷ್ಮೀ ಚಿತ್ರ ಮಂದಿರ ಹಿಂಭಾಗದ ಅಂಬಾಭವಾನಿ ಮಂದಿರ, ಮತ್ತೆ ಬಸವೇಶ್ವರ ವೃತ್ತ ದಿಂದ ಏಳು ಮಕ್ಕಳ ತಾಯಿ ಮಂದಿರ, ಲಕ್ಷ್ಮೀ ವೆಂಕಟೇಶ್ವರ ಮಂದಿರ,ದುರ್ಗಾ ಮಂದಿರ, ಶಾರದಾ ದೇವಿ ಮಂದಿರ ಪೂಜೆ ಸಲ್ಲಿಸಿ ಮೆರವಣಿಗೆ ರಾಘವೇಂದ್ರ ಮಂಗಲ ಕಾರ್ಯಾಲಯ ತಲುಪಲಿದೆ, ಪದ್ಮಾವತಿ ದೇವಿ ಮಂದಿರ, ಪಿಲೇಕಮ್ಮ ಮಂದಿರ, ಬನ್ನಿ ಮಹಾಕಾಳಿ ಮಂದಿರಗಳಿಗೆ ವಾಹನ ಮೂಲಕ ತೆರಳಿ ಪೂಜೆ ಸಲ್ಲಿಸಲಾಗುತ್ತದೆ.