ನೇಬಗೇರಿಯಲ್ಲಿ ತಂಗಡಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ; ಗ್ರಾಮಸ್ಥರಿಂದ ಮೆಚ್ಚುಗೆ
ಮುದ್ದೇಬಿಹಾಳ 20: ತಾಲೂಕಿನ ನೇಬಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ತಂಗಡಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು.ಕಾರ್ಯಕ್ರಮವನ್ನು ನೇಬಗೇರಿ ಗ್ರಾಮದ ಶಾಲೆಗೆ ಭೂಮಿಯನ್ನು ದಾನವಾಗಿ ನೀಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಹಿರಿಯರಾದ ಶ್ರೀಮತಿ ಕಾಶಿಬಾಯಿ ಬಸನಗೌಡ ಪೊಲೀಸ್ ಪಾಟೀಲ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನೇಬಗೇರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಶಂಕರಗೌಡ ಪೊಲೀಸ್ ಪಾಟೀಲ, ಗ್ರಾಮದ ಹಿರಿಯರಾದ ಭೀಮಸಿಂಗ್ ಪೂರ್ಪ ಚೌಹಾಣ್, ಮಂಜುನಾಥ ಬಸನಗೌಡ ಪಾಟೀಲ (ಕೊಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು), ಸಾಯಬಣ್ಣ ವಾಲಿಕಾರ್, ಸಂಗಣ್ಣ ಬಿಸಲದಿನ್ನಿ, ಆನಂದ ಲಮಾಣಿ, ಹನುಮಗೌಡ ಬಿರಾದಾರ್, ಬಸಪ್ಪ ರಾಜಪ್ಪ ಬಿಸಿಲದಿನ್ನಿ, ನೀಲೇಶ ಕೊಳೂರು,
ಪಂಚಾಕ್ಷರಿ ಹಿರೇಮಠ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ತಂಗಡಗಿ ಕ್ಲಸ್ಟರ್ ಮಟ್ಟದ ಸಿಆರಿ್ಪ ಎಂ.ಎ. ಅಮರವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾ ಕಾರಂಜಿಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿದ್ದ ಗಣ್ಯರನ್ನು ಶರಣಗೌಡ ಕೋಳೂರು ಸ್ವಾಗತಿಸಿದರು. ಎಸ್.ಬಿ. ಹೂಗಾರ ಹಾಗೂ ರವಿಗೌಡರ ಸನ್ಮಾನಿಸಿದರು. ಬಸವರಾಜ ಹಡಪದ ನಿರೂಪಣೆ ಮಾಡಿದರು.
ಪ್ರತಿಭಾ ಕಾರಂಜಿಯಲ್ಲಿ ತಂಗಡಗಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಛದ್ಮವೇಷ, ಪ್ರಬಂಧ ರಚನೆ, ನಾಟಕ, ಆಶುಭಾಷಣ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಧಾರ್ಮಿಕ ಪಠಣ, ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಜಾನಪದ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಬಹುಮಾನಗಳನ್ನು ಪಡೆದುಕೊಂಡರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮ ವೀಕ್ಷಿಸಲು ನೇಬಗೇರಿ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ಕಲಾಪ್ರದರ್ಶನಗಳನ್ನು ಕಣ್ತುಂಬಿಕೊಂಡು ಸಂತಸಪಟ್ಟರು.ಕಾರ್ಯಕ್ರಮದ ಅಂಗವಾಗಿ ನೇಬಗೇರಿ ಸರಕಾರಿ ಶಾಲೆಯನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು.
ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಬ. ಧಮ್ಮೂರಮಠ, ಸಿಆರಿ್ಪಗಳಾದ ಕಾಶೀನಾಥ ಸಜ್ಜನ ಹಾಗೂ ಎಂ.ಎ. ಅಮರವಾಡಗಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ತುರಡಿಗಿ, ಪಿ.ಆರ್. ನಾಯಕ್, ಮುಖ್ಯಶಿಕ್ಷಕರಾದ ಎಸ್.ಎಸ್. ಬಿರಾದಾರ, ಐ.ಎ. ಹಾವರಗಿ, ಜಿ.ಎಸ್. ತಾಳಿಕೋಟಿ, ಶ್ರೀಶೈಲ ಅಂಗಡಿ ಸೇರಿದಂತೆ ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಗ್ರಾಮದ ಗುರುಹಿರಿಯರು, ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಯಿತು.