ಮುದ್ದೇಬಿಹಾಳದಲ್ಲಿ ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಸಿರು ತೋರಣ ಬಳಗದಿಂದ ಸನ್ಮಾನ
ಮುದ್ದೇಬಿಹಾಳ 14: ಪ್ರಶಸ್ತಿಗಳು ನಮ್ಮನ್ನು ಇನ್ನಷ್ಟು ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರೇರೇಪಣೆ ನೀಡುತ್ತವೆ. ಸಮಾಜಮುಖಿ ಕೆಲಸಗಳನ್ನು ಮಾಡಿದ ಸಾಧಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಉದ್ದೇಶ ಪ್ರಶಸ್ತಿಗಳನ್ನು ನೀಡುವುದರ ಹಿಂದೆ ಇರುತ್ತದೆ ಎಂದು ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು.ಅವರು ಪಟ್ಟಣದ ಹುಡ್ಕೋದಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದ ಸಾಧಕರಿಗೆ ಏರಿ್ಡಸಿದ್ದ ಸನ್ಮಾನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ನಮ್ಮ ಬಳಗಕ್ಕೂ ಈ ಪ್ರಶಸ್ತಿ ಬಂದಿದ್ದು, ಈಗ ಮತ್ತೆ ನಮ್ಮ ತಾಲ್ಲೂಕಿನ ಮೂವರಿಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವನ್ನು ತಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಚಂದ್ರಶೇಖರ ಶಿವಯೋಗಿಮಠ, ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಎಸ್.ಎಂ.ನೆರಬೆಂಚಿ, ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಂತಿ ಪದ ಬಜನಾ ಪದ ಎಕಾಭಿನಯಪಾತ್ರ ಹೀಗೆ ಜನಪದ ಕ್ಷೇತ್ರ ದಲ್ಲಿ ತಮ್ದದೆ ಯಾದ ಚಾಪು ಮೂಡಿಸಿದ ಮರಿಯಪ್ಪ ಪವಾಡೆಪ್ಪ ವಾಳದವರ ಕುಂಟೋಜಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಚಂದ್ರಶೇಖರ ಶಿವಯೋಗಿಮಠ, ನನ್ನ ಸಾಧನೆಯ ಹಿಂದೆ ನನ್ನ ತಂದೆ, ತಾಯಿ, ಹಸಿರು ತೋರಣ ಬಳಗ, ಸ್ನೇಹ ಸಂಗಮ ಗೆಳೆಯರು, ವೈದ್ಯರ ಸಂಘದ ಬೆಂಬಲ ಇದೆ ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಎಸ್.ಎಂ.ನೆರಬೆಂಚಿ ಮಾತನಾಡಿ, ತಾವು 2002 ರಲ್ಲಿ ಬಾಪೂಜಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಐಟಿಐ ಕಾಲೇಜ್ ಸ್ಥಾಪಿಸುವ ಮೂಲಕ ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದ ತೃಪ್ತಿ ಇದೆ.
ಹಸಿರು ತೋರಣ ಗೆಳೆಯರ ಬಳಗ ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಸಾವಿರಾರು ಗಿಡಗಳನ್ನು ನೆಟ್ಟು, ಪೋಷಿಸುವ ಮೂಲಕ ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ತನ್ನದೇ ಆದ ಕಾಣಿಕೆ ಸಲ್ಲಿಸಿದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷ ನಾಗಭೂಷಣ ನಾವದಗಿ ಮಾತನಾಡಿದರು. ಪವಾಡೆಪ್ಪ ವಾಳದ ಜಾನಪದ ಗೀತೆ ಹಾಡಿದರು. ವೇದಿಕೆಯಲ್ಲಿ ಬಳಗದ ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಉಪಾಧ್ಯಕ್ಷ ವಿಲಾಸ ದೇಶಪಾಂಡೆ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ ಇದ್ದರು.
ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷರಾದ ಅಶೋಕ ರೇವಡಿ, ಬಿ.ಎಸ್. ಮೇಟಿ, ರಾಜಶೇಖರ ಕಲ್ಯಾಣಮಠ, ಡಾ.ವೀರೇಶ ಇಟಗಿ, ರವಿ ಗೂಳಿ, ಬಿ.ಎಚ್.ಬಳಬಟ್ಟಿ, ಸದಸ್ಯರಾದ ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಡಾ.ವಿಜಯಕುಮಾರ ಗೂಳಿ, ವೀರೇಶ ಢವಳಗಿ, ಎಚ್.ವೈ.ಪಾಟೀಲ, ಕಿರಣ ಪಾಟೀಲ, ಎಲ್.ಎಂ.ಚಲವಾದಿ, ಅಮರೇಶ ಐಹೊಳೆ, ವಿಶ್ವನಾಥ ನಾಗಠಾಣ, ಬಸವರಾಜ ಸಿದರಡ್ಡಿ, ಪರಶುರಾಮ ಕೂಡಗಿ, ವೀರೇಶ ಹಂಪನಗೌಡ್ರ, ವಿರುಪಾಕ್ಷಿ ಪತ್ತಾರ, ಲೋಹಿತ್ ನಾಲತವಾಡ, ಪುಟ್ಟು ಪಾಟೀಲ, ಹಣಮಂತರಾಯ, ಎಸ್.ಎಂ.ದೇಶಮುಖ ಸೇರಿದಂತೆ ಹಸಿರು ತೋರಣ ಬಳಗದ ಸದಸ್ಯರು ಇದ್ದರು. ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು.