ಕಂಪ್ಲಿ

ಕಂಪ್ಲಿ ತಾಲೂಕಿಗೆ ಹಂಪಿ ಸೇರಿಸುವ ಕನಸು : ಶಾಸಕ ಜೆ.ಎನ್‌.ಗಣೇಶ

ಕಂಪ್ಲಿ ತಾಲೂಕಿಗೆ ಹಂಪಿ ಸೇರಿಸುವ ಕನಸು : ಶಾಸಕ ಜೆ.ಎನ್‌.ಗಣೇಶ

               ಕಂಪ್ಲಿ 14 : ಇತಿಹಾಸವುಳ್ಳ ಕಂಪ್ಲಿ ತಾಲೂಕಿಗೆ ಹಂಪಿ ಸೇರಿಸುವ ಕನಸಿದೆ ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು.   ಪಟ್ಟಣದ ವೀರಶೈವ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಉದ್ಘಾಟಿಸಿ ಮಾತನಾಡಿ, ಕಂಪ್ಲಿಗೆ ತನ್ನದೇ ಆದ ಇತಿಹಾಸವಿದೆ. ಹಂಪಿಯ ಹೆಬ್ಬಾಗಿಲು ಕಂಪ್ಲಿಯಾಗಿದ್ದು, ಬರುವ ದಿನದಲ್ಲಿ ಹಂಪಿಯನ್ನು ಕಂಪ್ಲಿಗೆ ಸೇರಿಸುವ ಕನಸು ನನ್ನದಾಗಿದೆ ಎಂದರು.  

              ಪಟ್ಟಣದಲ್ಲಿ ಕಸಾಪ ತಾಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿ ಸಮಾರೋಪ ಸಮಾರಂಭದಲ್ಲಿ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ಸಮ್ಮೇಳನಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಹೇಳಿದರು. ದ್ವಿಭಾಷ ಮಾಧ್ಯಮ ನೀತಿ ಕೈಬಿಟ್ಟು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವಲ್ಲಿ ಸರ್ಕಾರ ಮುಂದಾಗಬೇಕು.

               ನ್ಯಾಯಾಲಯ ಸೇರಿ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ಕಡತ ವಿಲೇವಾರಿಯಾಗಬೇಕು, ಪ್ರತಿ ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳಬೇಕು, ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಅನುಷ್ಠಾನಗೊಳಿಸಬೇಕು ಎನ್ನುವ ನಿರ್ಣಯಗಳನ್ನು ಅಂಗೀಕರಿಸಿದೆ ಎಂದರು.

               ಕೃಷಿ ಗೋಷ್ಠಿಯ ಅಧ್ಯಕ್ಷತೆಯನ್ನು ರಾಷ್ಟ್ರ​‍್ರಶಸ್ತಿ ವಿಜೇತೆ ಕೃಷಿ ಮಹಿಳೆ ಕವಿತಾ ಮಿಶ್ರ ವಹಿಸಿದ್ದರು. ಡಿಎಟಿಸಿ ಎಎಡಿ ಎಂ.ದಯಾನಂದ 'ಸುಸ್ಥಿರ ಮತ್ತು ನೈಸರ್ಗಿಕ ಕೃಷಿ ಪದ್ಧತಿ' ಕುರಿತು, ಇತಿಹಾಸ ಗೋಷ್ಠಿಯಲ್ಲಿ ಶಿಕ್ಷಕಿ ಡಾ.ಎಸ್‌.ಎಂ.ಸಾವಿತ್ರಿಯವರು 'ಕಂಪ್ಲಿ ಇತಿಹಾಸ ಮತ್ತು ಚಾರಿತ್ರಿಕ ಪರಂಪರೆ ಕುರಿತು, ವಿಚಾರ ಗೋಷ್ಠಿಯಲ್ಲಿ 'ಪ್ರಸ್ತುತ ದಿನಮಾನಗಳಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಚಿಂತನೆ' ಕುರಿತು, ಕವಿಗೋಷ್ಠಿಯಲ್ಲಿ ಹದಿನೇಳು ಕವಿಗಳು ಕವಿತೆ ಮಂಡಿಸಿದರು.

            ಕಲ್ಗುಡಿ ನಾಗರತ್ನ ತಂಡದ ‘ಸಾಲುಮರದ ತಿಮ್ಮಕ್ಕ’ ಏಕಾಂಕ ನಾಟಕ,ದುರ್ಗಾದಾಸ್ ಹಂಪಿ ಬೀಟ್ಸ್‌ ವಾದನ, ಡಿ.ವಿಶ್ವನಾಥ ತಂಡದ ಕಾಂತಾರ ಹಾಡಿನ ನೃತ್ಯ, ಮರಿಯಮ್ಮನಹಳ್ಳಿಯ ಗಮಕ ಕಲಾ ಪರಿಷತ್ ಕಲಾವಿದರಿಂದ ಗಮಕ ಕಲೆ, ಬೆಳಗಾವಿಯ ವಿದೂಷಿ ಡಾ.ಕೆ.ಎಂ.ರೋಹಿಣಿ ಗಂಗಾಧರಯ್ಯನವರ ಹಿಂದೂಸ್ತಾನಿ ಸಂಗೀತ, ಡಾ.ಸುರೇಂದ್ರನಾಥರ ತೊಗಲುಬೊಂಬೆ ಆಟ, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಾಮೂಹಿಕ ಜನಪದ ನೃತ್ಯ, ಏಕಪಾತ್ರಾಭಿನಯ,  ನಾಟಕ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

                 ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್‌.ಶಾಮಸುಂದರರಾವ್, ಎಸ್‌.ಡಿ.ಬಸವರಾಜ, ವೀರಮ್ಮ ನಾಗರಾಜ, ಶ್ವೇತಾ ಅಕ್ಕಿ, ಡಾ.ಎ.ಸಿ.ದಾನಪ್ಪ, ಸಿ.ವೆಂಕಟೇಶ, ಎಸ್‌.ವಿಜಯಲಕ್ಷ್ಮಿ, ಅಶೋಕ ಕುಕನೂರು, ಬಿ.ಜಿಲಾನ್‌ಸಾಬ್, ಕೆ.ಎಂ.ಹೇಮಯ್ಯಸ್ವಾಮಿ, ಬಿ.ಶ್ರೀನಿವಾಸರೆಡ್ಡಿ, ಸಿದ್ದಣ್ಣ ಪರಮೇಶ್ವರ, ಎಚ್‌.ದೊಡ್ಡಬಸಪ್ಪ, ಚಂದ್ರಶೇಖರಗೌಡ, ಹಾದಿಮನಿ ಕಾಳಿಂಗವರ್ಧನ, ಎಲಿಗಾರ ವೆಂಕಟರೆಡ್ಡಿ, ಡಾ.ಜಂಬುನಾಥಗೌಡ, ವಿ.ವಿದ್ಯಾಧರ, ಯು.ಎಂ.ವಿದ್ಯಾಶಂಕರ, ಎಂ.ಶಾಷಾವಲಿ ಇತರರಿದ್ದರು. 


ಸುದ್ದಿ ಓದಿ