ವಿಜಯಪುರ

ಬೆಂಗಳೂರಿಗೆ ಸೀಮಿತಗೊಂಡ ಚಲನಚಿತ್ರ ರಂಗ ಉತ್ತರ ಕರ್ನಾಟಕಕ್ಕೂ ಹಬ್ಬಬೇಕು: ಡಾ. ಉಪಾಸೆ

ಬೆಂಗಳೂರಿಗೆ ಸೀಮಿತಗೊಂಡ ಚಲನಚಿತ್ರ ರಂಗ ಉತ್ತರ ಕರ್ನಾಟಕಕ್ಕೂ ಹಬ್ಬಬೇಕು: ಡಾ. ಉಪಾಸೆ
The film industry, currently confined to Bengaluru, should expand to North Karnataka as well: Dr. Up

ಲೋಕದರ್ಶನ ವರದಿ 

            ವಿಜಯಪುರ  14: ಚಲನಚಿತ್ರ ರಂಗವೆಂದರೆ ಕೇವಲ ಬೆಂಗಳೂರಿನ ಗಾಂಧಿ ನಗರ ಮಾತ್ರವಲ್ಲ. ಅದು ಉತ್ತರ ಕರ್ನಾಟಕ ಪ್ರತಿ ಜಿಲ್ಲೆಗೂ ಹಬ್ಬಬೇಕೆಂದು ಬಯಸಿ, ಇಂದು ನಗರದಲ್ಲಿ ಧಗೆ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದಕ್ಕೆ ಹೆಮ್ಮೆ ಇದೆ ಎಂದು ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಕ ಡಾ. ಸಂಗಮೇಶ ಉಪಾಸೆ ಹೇಳಿದರು. 

                ನಗರದ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಹಮ್ಮಿಕೊಂಡ ಈಶ್ವರ ಕೆರ್ನೆಳ್ಳಿ ನಿರ್ದೇಶನದ ಧಗೆ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಉತ್ತರ ಕರ್ನಾಟಕ ಕಲಾವಿದರಿಗೆ ಚಲನಚಿತ್ರ ರಂಗದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಲನಚಿತ್ರ ನಿರ್ಮಾಣದಂತಹ ಚಟುವಟಿಕೆಯಲ್ಲಿ ನಿರತನಾಗಿದ್ದೇನೆ. ಧಗೆ ಚಿತ್ರವು ಬಡತನವನ್ನು ಮೆಟ್ಟಿ ನಿಲ್ಲುವ ಮತ್ತು ಕುಡಿತದ ಕೆಡಕುಗಳನ್ನು ಸಾರಿ ಹೇಳುವ ಮನೋಜ್ಞ ಸಾಮಾಜಿಕ ಕಥೆಯಾಗಿದೆ.                      ಚಿತ್ರದ ನಿರ್ಮಾಪಕರಾದ ದೀಪಾ ಬಿ.ಎಂ., ಈಶ್ವರ​‍್ಪ ಕೆ., ಮಡಿವಾಳಪ್ಪ ಗೋಗಿ ಅವರು ಸಾಕಷ್ಟು ಪರಿಶ್ರಮ ಪಟ್ಟು, ಚಿತ್ರ ನಿರ್ಮಿಸಿದ್ದಾರೆ. ಚಿತ್ರದ ತಾರಾ ಬಳಗದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರವನ್ನು ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡುವ ಯೋಚನೆಯಾಗಿದೆ ಎಂದರು. 

                ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಚಲನಚಿತ್ರವು ಸಾಮಾಜಿ ಕಳಕಳಿ ಹೊಂದಿದೆ. ಈ ಚಿತ್ರವು ಯಶಸ್ಸು ಕಾಣಲೆಂದು ಹಾರೈಸುವೆ. ಉತ್ತರ ಕರ್ನಾಕಟದ ಜಿಲ್ಲೆಗಳಲ್ಲಿ ಸಾಕಷ್ಟು ಜನ ಕಲಾವಿದರು ಇದ್ದಾರೆ, ಅವರಿಗೆ ಚಲನಚಿತ್ರ ರಂಗದಲ್ಲಿ ಅವಕಾಶ ಸಿಗುವಂತಾಗಬೇಕು ಎಂದರು. 

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಧಗೆ ಚಿತ್ರವು ಬಡತನ ಮತ್ತು ಕುಡಿತದ ದುಷ್ಪರಿಣಾಮವನ್ನು ಬಿಂಬಿಸುತ್ತದೆ. 

              ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಚಿತ್ರ ತಂಡಕ್ಕೆ ಧನ್ಯವಾದ ಸಲ್ಲಿಸುವೆ ಎಂದರು. ಬಿಜೆಪಿ ಮುಖಂಡರು ಡಾ. ಸುರೇಶ ಬಿರಾದಾರ, ಸಂಗಮೇಶ ಜಾಧವ, ಚಲನಚಿತ್ರ ನಿರ್ಮಾಪಕ ಮಡಿವಾಳಪ್ಪ ಗೋಗಿ, ಚಿತ್ರದ ಕಲಾವಿದರಾದ ಮುತ್ತು ಸಂಕಣ್ಣವರ, ಸಚಿನ್ ಅಳ್ಳಿಕಟ್ಟಿ, ವೀರೇಶ ಗಬ್ಬೂರ, ಸುನೀಲಕುಮಾರ ಸುಧಾಕರ, ಕಪಿಲ್ ಜವಳಕರ, ನಾಗರಾಜ ಕೆ.ಆರ್‌. ಇದ್ದರು. 


ಸುದ್ದಿ ಓದಿ