ವಿಜಯಪುರ

ಮಹಿಳೆಯರ ಸಾವಲಂಬಿ ಬದುಕಿಗೆ ಜ್ಞಾನ ವಿಕಾಸ ಕಾರ್ಯಕ್ರಮ ಪೂರಕ: ಪಿಎಸ್‌ಐ ಪ್ರೇಮಾ ಚೌರ

ಮಹಿಳೆಯರ ಸಾವಲಂಬಿ ಬದುಕಿಗೆ ಜ್ಞಾನ ವಿಕಾಸ ಕಾರ್ಯಕ್ರಮ ಪೂರಕ: ಪಿಎಸ್‌ಐ ಪ್ರೇಮಾ ಚೌರ

              ದೇವರ ಹಿಪ್ಪರಗಿ  14ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್‌ಐ ಪ್ರೇಮಾ ಚೌರ, ಮಹಿಳೆಯರು ಧರ್ಮಸ್ಥಳ ಯೋಜನೆಯ ವಿವಿಧ ಸೌಲಭ್ಯ ಹಾಗೂ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

            ಪ್ರಾಸ್ತಾವಿಕವಾಗಿ ಸಿಂದಗಿ ತಾಲೂಕ ಯೋಜನಾಧಿಕಾರಿ ಬಿನೋಯ್ ಅವರು ಮಾತನಾಡಿ, ಶ್ರೀ ಧರ್ಮಸ್ಥಳ ಯೋಜನೆಯ ವಿವಿಧ ಜನ ಪರ ಕಾರ್ಯಕ್ರಮಗಳು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಪಂಚಾಕ್ಷರಿ ಮಿಂಚಿನಾಳ ಮಾತನಾಡಿ,

               ಯೋಜನೆಯ ಸಾಮಾಜಿಕ ಕಳಕಳಿ ಹಾಗೂ ಸಮಾಜಮುಖಿ ಸೇವ ಕಾರ್ಯಗಳ ಕುರಿತು ಮಾತನಾಡಿದರು. ಶಿಕ್ಷಕ ಅರುಣ ಕೋರವಾರ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ದಿಲಾ, ಸುವರ್ಣ ಹೊನ್ನಳ್ಳಿ, ವಲಯ ಮೇಲ್ವಿಚಾರಕ ಶರಣು ಸೇರಿದಂತೆ ಸೇವಾ ಪ್ರತಿನಿಧಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ತರಬೇತಿ ಪಡೆದ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ