ವಿಜಯಪುರ

ಅನುದಾನಿತ ನೌಕರರ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರಿಗೆ ಮನವಿ

ಅನುದಾನಿತ ನೌಕರರ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರಿಗೆ ಮನವಿ
Appeal to Education Minister Madhu Bangarappa to resolve the issues faced by aided-institution emplo


          ವಿಜಯಪುರ 14:  ಇಂದು ವಿಜಯಪುರದಲ್ಲಿ ಶಿಕ್ಷಣ ಸಚಿವರಾದ  ಮಧು ಬಂಗಾರ​‍್ಪ ಅವರನ್ನು ಭೇಟಿಯಾಗಿ ಅನುದಾನಿತ ನೌಕರರ ಸಮಸ್ಯೆಗಳ ಕುರಿತಾಗಿ ಮನವಿಯನ್ನು ಸಲ್ಲಿಸಲಾಯಿತು. ಅಲ್ಲದೆ ಮಾನ್ಯತೆ ನವೀಕರಣದ ಸರಳಿಕರಣ ಹಾಗೂ ಮಾನ್ಯತಾ ನವೀಕರಣದ ಕುರಿತಾಗಿ ವೇತನ ತಡೆ ಹಿಡಿಯದಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಅಧಿಕಾರಿಗಳ  ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

            ಈ ಸಂದರ್ಭದಲ್ಲಿ ಡಾ.ಈಶ್ವರ ಉಳ್ಳಾಗಡ್ಡಿ ಅಪರ ಆಯುಕ್ತರು ಧಾರವಾಡ ವಿಭಾಗ ಇವರಿಗೂ ಕೂಡ ರಾಜ್ಯ ಘಟಕದ ವತಿಯಿಂದ ಅನುದಾನಿತ ನೌಕರರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶಿವಾನಂದ ಹಿರೇಕುರಬರ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ವಪ್ಪಾರಿ ಜಿಲ್ಲಾಧ್ಯಕ್ಷರಾದ ಗೀರೀಶ್ ಬಿರಾದಾರ ತಾಲೂಕು ಅಧ್ಯಕ್ಷರು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್ ಕುಲಕರ್ಣಿ ಛ್ಘಿಣ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ ಹೆಚ್ ನಡಗಿರಿ ಜಗಜ್ಯೋತಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಲ್ ಬಿ ಪಾಟೀಲ್ ತಾಲೂಕ ಪ್ರಧಾನ ಕಾರ್ಯದರ್ಶಿ ಬಿ ಎನ್ ಕಾಳಿ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ