ವಿಜಯಪುರ

ವಿಜಯಪುರ ಜಿಲ್ಲಾ ಯುವಜನೋತ್ಸವದಲ್ಲಿ ಪರಮೇಶ್ವರ ರೊಟ್ಟಿ ತಂಡಕ್ಕೆ ಸತತ ಆರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ

ವಿಜಯಪುರ ಜಿಲ್ಲಾ ಯುವಜನೋತ್ಸವದಲ್ಲಿ ಪರಮೇಶ್ವರ ರೊಟ್ಟಿ ತಂಡಕ್ಕೆ ಸತತ ಆರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
Parameshwara Rotti’s team selected for the state level for the sixth consecutive time at the Vijayap


              ವಿಜಯಪುರ 14: ರಾಜ್ಯಮಟ್ಟಕ್ಕೆ ಆಯ್ಕೆ ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ 2026 27 ನೇ ಸಾಲಿನ ವಿಜಯಪುರ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ   ಪರಮೇಶ್ವರ ರೊಟ್ಟಿ ಅವರ ನೇತೃತ್ವದ ತಂಡ ಸತತವಾಗಿ ಆರು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆ  ದಿನಾಂಕ 12 /11/2026 ರಂದು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಹಾಗೂ ನುಕ್ಕಾಡ ನಾಟಕ ಎರಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ  ಸತತವಾಗಿ ಆರನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

               ಜಿಲ್ಲಾಮಟ್ಟದಲ್ಲಿ ವೇದಿಕೆಯ ಮೇಲಿರುವ ಶ್ರೀಯುತ ಜಾವೇದ್ ಜಮಾದಾರ್ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರೀಯುತ ರಾಜಶೇಖರ್ ದೈವಾಡಿ ಸಹಾಯಕ ನಿರ್ದೇಶಕರು ಯುವ ಸವೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಹಾಗೂ ಇನ್ನಿತ ಗಣ್ಯ ವ್ಯಕ್ತಿಗಳು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು  ನೀಡಿ ಗೌರವಿಸಿದರು.

               ಮೂಲತಃ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರುಗಿ ಗ್ರಾಮದವರಾದ  ಇವರು ಆಶುಭಾಷಣ , ಏಕಾಂಕ ನಾಟಕ , ಜನಪದ ಗೀತೆ , ಜಾನಪದ ನೃತ್ಯ , ಈ ಒಂದು ಸ್ಪರ್ಧೆಗಳನ್ನು ರಾಜ್ಯಮಟ್ಟವನ್ನ ಪ್ರತಿನಿಧಿಸಿದ ಕೀರ್ತಿ ಹೊರಳಲಾಗಿದೆ ಇವರಲ್ಲಿರುವ ಜಾನಪದ  ಕ್ಷೇತ್ರದ ಆಸಕ್ತಿ ಅಭಿರುಚಿ ಮೆಚ್ಚುವಂಥದ್ದು ಕಳೆದ ಬಾರಿಯೂ ಕೂಡ ಆಶುಭಾಷಣ ಸ್ಪರ್ಧೆ ಜಾನಪದ ಗೀತೆ ಜಾನಪದ ನೃತ್ಯ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ  ವಿಜೇತರಾದ ಕೀರ್ತಿ ಇವರುದು.

               ಈ ಬಾರಿಯ ಜಾನಪದ ಗೀತೆ ಹಾಗೂ ನಾಟಕ ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ 1.  ಸರಸ್ವತಿ ಪರಮೇಶ್ವರ ರೊಟ್ಟಿ 2.  ಅಮಿತ್ ಜಮದಾಡಿ 3.  ಸಂಭಾಜಿ ನಿಕ್ಕಂ 4.  ಚೇತನ್ ತಳವಾರ್ 5.  ಮಾಳಪ್ಪ ದೊಡ್ಡಮನಿ 6.  ಶ್ರವಣಕುಮಾರ್ ಬಡಿಗೇರ್ 7.  ಭಾಗ್ಯಶ್ರೀ ವಾಲಿಕಾರ್ 8.  ಭಾಗ್ಯಶ್ರೀ ದೊಡ್ಡಮನಿ 9.  ಪ್ರಿಯಾಂಕ 10.  ದಾನಮ್ಮ ಕೊಲ್ಲೂರು ಭಾಗವಹಿಸಿ ಅದ್ಭುತ ಪ್ರದರ್ಶನವನ್ನು ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವರದು. 


ಸುದ್ದಿ ಓದಿ