ಕಂಪ್ಲಿ

ರೈತರಿಗೆ ನೀರು ಕೊಡಿ, ಇಲ್ಲಂದ್ರೆ, ವಿಷ ಕೊಡಿ : ವಿ.ಬಿ.ಗೌಡ ಅಕ್ರೋಶ

ರೈತರಿಗೆ ನೀರು ಕೊಡಿ, ಇಲ್ಲಂದ್ರೆ, ವಿಷ ಕೊಡಿ : ವಿ.ಬಿ.ಗೌಡ ಅಕ್ರೋಶ

ಲೋಕದರ್ಶನ ವರದಿ 

             ಕಂಪ್ಲಿ 14 : ರೈತರು ಸಾಲ ಸೂಲ ಮಾಡಿ ಬೆಳೆ ಬೆಳೆದಿದ್ದಾರೆ. ಐಸಿಸಿ ಚಕ್ರವರ್ತಿ ನೀನಾ. ರೈತರಿಗೆ ನೀರು ಕೊಡಿ, ಇಲ್ಲಂದ್ರೆ ವಿಷ ಕೊಡಿಸ್ವಾಮಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಹೇಳಿದರು. ಪಟ್ಟಣದ ಉದ್ಭವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಕಾಲ್ನಡಿಗೆಯ ರೈತರ ಬೃಹತ್ ಪಾದಯಾತ್ರೆಯಲ್ಲಿ ಮಾತನಾಡಿ, ಮುಂಚಿತವಾಗಿ ಹೇಳಿದ್ರೆ ರೈತರು ಬೆಳೆ ಬೆಳೆಯುತ್ತಿದ್ದಿಲ್ಲ.

          ಸುಳ್ಳು ಲೆಕ್ಕ ಹೇಳಿ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ. ತುಂಗಭದ್ರ ಬಲದಂಡೆಯ ಎಲ್ ಎಲ್ ಸಿ ಕೆಳಭಾಗದಲ್ಲಿ 5-6 ಸಾವಿರ ಕೋಟಿಯಷ್ಟು ಬೆಳೆ ಉಳಿಸಬೇಕಾಗಿದೆ. ಮೊದಲೇ ನೀರಿಲ್ಲಂದ್ರೆ ರೈತರು ಬೆಳೆ ಬೆಳೆಯುತ್ತಿದ್ದಿಲ್ಲ. ಮತ್ತು ನಿಮ್ಮನ್ನು ನೀರು ಕೇಳುತ್ತಿದ್ದಿಲ್ಲ. ಈಗಾಗಲೇ ಐಸಿಸಿ ತೀರ್ಮಾನದಂತೆ ರೈತರು ಮುಂಗಾರು ಬೆಳೆ ಬೆಳೆದಿದ್ದಾರೆ. ಈಗ ಕಟಾವು ಹಂತಕ್ಕೆ ಬರುತ್ತಿದ್ದು, ನೀರು ಸ್ಥಗಿತಗೊಳಿಸಿದರೆ, ರೈತರು ಬದುಕು ನಿರ್ನಾಮವಾಗಲಿದೆ.

                 ಆದ್ದರಿಂದ ಡಿ.15ತನಕ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ರೈತರಿಂದ ಬೃಹತ್ ಪಾದಯಾತ್ರೆಯನ್ನು ಮುನಿರಾಬಾದ್ ನೀರಾವರಿ ಕೇಂದ್ರ ಕಛೇರಿಗೆ ತೆರಳಿಗೆ, ಮುತ್ತಿಗೆ ಹಾಕಲಾಗುತ್ತಿದೆ. ಕೂಡಲೇ ಸರ್ಕಾರ, ಅಧಿಕಾರಿಗಳು ತುರ್ತಾಗಿ ಚರ್ಚಿಸಿ, ಡಿ.15ತನಕ ನೀರು ಹರಿಸುವ ನಿರ್ಧಾರವನ್ನು ಕೈಗೊಂಡು, ರೈತರಿಗೆ ತಿಳಿಸಬೇಕು. ಇಲ್ಲವಾದಲ್ಲಿ ನ.16ರಂದು ಬೆಳಿಗ್ಗೆ ಮುನಿರಾಬಾದ್ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು.

            ನೀರು ಕೊಡುವತನ ಹೋರಾಟ ನಿಲ್ಲಿಸುವುದಿಲ್ಲ. ನೀರು ಕೊಡಿ, ಇಲ್ಲಂದ್ರೆ ರೈತರಿಗೆ ವಿಷ ಕೊಡಿ ಎಂದು ಎಚ್ಚರಿಸಿದರು.  ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವಿ.ವಿರೇಶ್, ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ವೆಂಕಟರಾಮರಾಜು, ಜಿ.ಲಿಂಗನಗೌಡ, ಟಿ.ಗಂಗಣ್ಣ, ಆನಂದ್ ರೆಡ್ಡಿ, ವಾಲಿ ಕೊಟ್ರ​‍್ಪ, ಸದಾಶಿವಪ್ಪ, ಕಾಗಿ ಈರಣ್ಣ ಸೇರಿದಂತೆ ರೈತರಿದ್ದರು. 


ಸುದ್ದಿ ಓದಿ