ಅಕ್ಕಿಗುಂದ ಮಾಗಡಿ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯ
ಲಕ್ಷ್ಮೇಶ್ವರ" 20 ; ತಾಲೂಕಿನ ಅಕ್ಕಿಗುಂದ ಗ್ರಾಮದಿಂದ ಮಾಗಡಿ ಗ್ರಾಮಕ್ಕೆ ತೆರಳವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಾಲ್ಕು ಕಿಲೋಮೀಟರ್ ರಸ್ತೆ ಇದಾಗಿದ್ದು ಇದರಲ್ಲಿ ಈಗಾಗಲೇ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಅಭಿವೃದ್ಧಿ ಹೊಂದಿದೆ ಉಳಿದ ಮೂರು ಕಿಲೋಮೀಟರ್ ರಸ್ತೆ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದದೆ ಹಾಳಾಗಿ ಹೋಗಿದೆ ಇದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.
ಇದೇ ರಸ್ತೆಯ ಮುಖಾಂತರ ನೂರಾರು ಜನ ರೈತರು ತಮ್ಮ ಜಮೀನುಗಳಿಗೆ ಎತ್ತು ಚಕ್ಕಡೆ ಬೈಕ್ ಮುಖಾಂತರ ಸಂಚರಿಸುತ್ತಾರೆ ಆದರೆ ರಸ್ತೆ ಹಾಳಾಗಿದ್ದರಿಂದ ಬಹಳ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಅದಕ್ಕೆ ಸಂಬಂಧಪಟ್ಟಂತ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆಯನ್ನು ಬೇಗನೆ ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಅಕ್ಕಿಗುಂದ ಗ್ರಾಮಸ್ಥರಾದಫಕೀರಯ್ಯ ಹಿರೇಮಠ ಈಶ್ವರ ಹಿರೇಮಠ ಹನುಮಂತ ಲಮಾಣಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ