ಗದಗ

ಆಯೋಗದ ಸದಸ್ಯ ಮಾರುತಿ ದೊಡ್ಡಲಿಂಗಣ್ಣವರಿಂದ ಅನೀರೀಕ್ಷಿತ ಬೇಟಿ, ಪರೀಶೀಲನೆ ಪಡಿತರ ಅಕ್ಕಿ, ಗೋಧಿ ದಾಸ್ತಾನಿನಲ್ಲಿ ಅಕ್ರಮ ಪತ್ತೆ; ಮೂರು ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್‌ ರದ್ದತಿಗೆ ಸೂಚನೆ!

ಆಯೋಗದ ಸದಸ್ಯ ಮಾರುತಿ ದೊಡ್ಡಲಿಂಗಣ್ಣವರಿಂದ ಅನೀರೀಕ್ಷಿತ ಬೇಟಿ, ಪರೀಶೀಲನೆ ಪಡಿತರ ಅಕ್ಕಿ, ಗೋಧಿ ದಾಸ್ತಾನಿನಲ್ಲಿ ಅಕ್ರಮ ಪತ್ತೆ; ಮೂರು ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್‌ ರದ್ದತಿಗೆ ಸೂಚನೆ!
Commission member Maruti Doddelinganna conducted a surprise visit and inspection, uncovering irregul


            ಗದಗ 20 : ಜಿಲ್ಲೆಯಲ್ಲಿನ ಅನ್ನಭಾಗ್ಯ ಪಡಿತರ ವಿತರಣೆ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳ ವಿರುದ್ಧ ಕರ್ನಾಟಕ ರಾಜ್ಯ ಆಹಾರ ಆಯೋಗ ಖಡಕ್ ಕ್ರಮಕ್ಕೆ ಮುಂದಾಗಿದೆ. ಆಯೋಗದ ಸದಸ್ಯರು ನವೆಂಬರ್ 18 ಮತ್ತು 19ರಂದು ಗದಗ ಜಿಲ್ಲೆಯಲ್ಲಿ ಕೈಗೊಂಡ ಪರೀಶೀಲನಾ ಪ್ರವಾಸದಲ್ಲಿ ಪಡಿತರ ದಾಸ್ತಾನಿನಲ್ಲಿ ಅಕ್ರಮ, ನ್ಯಾಯಬೆಲೆ ಅಂಗಡಿಗಳ ಕರ್ತವ್ಯ ಲೋಪ, ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಆಹಾರ, ಸ್ವಚ್ಛತೆ ಕೊರತೆ ಹಾಗೂ ಹಾಜರಾತಿ ದಾಖಲೆಗಳಲ್ಲಿನ ಅವ್ಯವಸ್ಥೆ ಬೆಳಕಿಗೆ ಬಂದಿವೆ.

           ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. 94 ಕ್ವಿಂಟಲ್ ಅಕ್ಕಿ, 16.24 ಕ್ವಿಂಟಲ್ ಗೋಧಿ ಹೆಚ್ಚುವರಿ ದಾಸ್ತಾನು ಪತ್ತೆ : ನವೆಂಬರ್ 18ರಂದು ಆಯೋಗದ ಸದಸ್ಯ ಮಾರುತಿ ದೊಡ್ಡಲಿಂಗಣ್ಣವರ ಅವರು ಮುಂಡರಗಿ ಎಪಿಎಂಸಿ ಯಾರ್ಡ್ನಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್ಸಿಎಸ್ಸಿ) ಸಗಟು ಮಳಿಗೆಗೆ ಭೇಟಿ ನೀಡಿ ಪರೀಶೀಲಿಸಿದರು.

             ತಂತ್ರಾಂಶದ ದಾಸ್ತಾನು ಹಾಗೂ ಭೌತಿಕ ದಾಸ್ತಾನು ತಾಳೆ ಹಾಕಿದಾಗ 94 ಕ್ವಿಂಟಲ್ ಅಕ್ಕಿ ಮತ್ತು 16.24 ಕ್ವಿಂಟಲ್ ಗೋಧಿ ಹೆಚ್ಚುವರಿಯಾಗಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಅಲ್ಲದೆ, ತಂತ್ರಾಂಶದಲ್ಲಿ 17.33 ಕ್ವಿಂಟಲ್ ಜೋಳ ಉಳಿಕೆ ಎಂದು ನಮೂದಾಗಿದ್ದರೆ, ಭೌತಿಕವಾಗಿ 134.767 ಕ್ವಿಂಟಲ್ ಜೋಳ ಸಂಗ್ರಹಿಸಿರುವುದು ಕಂಡುಬಂದಿದೆ. ಮೂರು ನ್ಯಾಯಬೆಲೆ ಅಂಗಡಿಗಳಿಗೆ ಬೀಗ: ಲೈಸೆನ್ಸ್‌ ರದ್ದತಿಗೆ ಸೂಚನೆ:  

         ಮುಂಡರಗಿ ಪಟ್ಟಣದ ನ್ಯಾಯಬೆಲೆ ಅಂಗಡಿಗಳ ಪರೀಶೀಲನೆ ವೇಳೆ ಸಂಜೆ 6.15ರ ವೇಳೆಯಲ್ಲಿಯೂ ಮೂರು ಅಂಗಡಿಗಳು ಬಾಗಿಲು ಮುಚ್ಚಿಕೊಂಡಿರುವುದು ಕಂಡುಬಂದಿದೆ. ವಾರ್ಡ್‌ ನಂ.3ರ ಅಂಗಡಿ ಸಂಖ್ಯೆ 43, ವಾರ್ಡ್‌ ನಂ.4ರ ಅಂಗಡಿ ಸಂಖ್ಯೆ 44 ಹಾಗೂ ವಾರ್ಡ್‌ ನಂ.1ರ ಅಂಗಡಿ ಸಂಖ್ಯೆ 41 ಪರೀಶೀಲನೆಗೆ ತೆರಳಿದಾಗ ಮೂರೂ ಅಂಗಡಿಗಳು ಬೀಗ ಹಾಕಿದ್ದವು.

          ಅಂಗಡಿ ತೆರೆಯುವಂತೆ ದೂರವಾಣಿ ಮೂಲಕ ಸೂಚಿಸಿದರೂ ಸಂಬಂಧಪಟ್ಟವರು ಸ್ಥಳಕ್ಕೆ ಬರಲು ನಿರಾಕರಿಸಿದ್ದಾರೆ. ಸರ್ಕಾರದ ನಿಯಮದಂತೆ ಸಮಯಕ್ಕೆ ಸರಿಯಾಗಿ ಅಂಗಡಿ ತೆರೆದು ಪಡಿತರ ವಿತರಿಸದ ಹಿನ್ನೆಲೆಯಲ್ಲಿ ಮೂರೂ ಅಂಗಡಿಗಳ ಪ್ರಾಧಿಕಾರ (ಲೈಸೆನ್ಸ್‌) ರದ್ದುಗೊಳಿಸಲು ಸೂಚಿಸಲಾಗಿದೆ.  

         ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಊಟದ ಅವ್ಯವಸ್ಥೆ; ನಿಲಯ ಪಾಲಕಿಯ ಅಮಾನತಿಗೆ ಸೂಚನೆ:  ಮುಂಡರಗಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್‌ ಮ್ಯಾಟ್ರಿಕ್ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ ಪರೀಶೀಲನೆ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗದಿಪಡಿಸಿದ ಮೆನು ಮತ್ತು ಪ್ರಮಾಣದಂತೆ ಆಹಾರ ನೀಡದಿರುವುದು,

          ಕಳಪೆ ಗುಣಮಟ್ಟದ ಊಟ, ಅನ್ನದಲ್ಲಿ ಹುಳು, ನೀರಿನಂಥ ಸಾರು, ಹಾಲಿನ ಕೊರತೆ ಹಾಗೂ ತರಕಾರಿ ಪೂರೈಕೆಯಲ್ಲಿ ಅವ್ಯವಸ್ಥೆ ಕಂಡುಬಂದಿದೆ. ಸುಮಾರು 150 ವಿದ್ಯಾರ್ಥಿನಿಯರಿಗೆ ದಿನಕ್ಕೆ ಕೇವಲ ಒಂದು ಲೀಟರ್ ಹಾಲು ಖರೀದಿಸುತ್ತಿದ್ದು, ಅದರಲ್ಲಿಯೂ ಅರ್ಧದಷ್ಟು ಬಳಕೆಯಾಗುತ್ತಿದೆ ಎಂಬ ಮಾಹಿತಿ ಪರೀಶೀಲನೆಯಲ್ಲಿ ತಿಳಿದುಬಂದಿದೆ.

             ಬಿಸೀನೀರು, ಸ್ವಚ್ಛತೆ, ಸ್ನಾನಗೃಹಗಳಿಗೆ ಬೆಳಕು ಹಾಗೂ ಸುರಕ್ಷತಾ ವ್ಯವಸ್ಥೆಗಳೂ ಇಲ್ಲ. ದಿನಸಿ ಖರೀದಿ, ಪೂರೈಕೆ, ಜಿಪಿಎಸ್ ಫೋಟೋ ಮತ್ತು ಲೆಕ್ಕಪತ್ರಗಳ ನಿರ್ವಹಣೆಯಲ್ಲಿಯೂ ಲೋಪ ಕಂಡುಬಂದಿದೆ. ವಸತಿನಿಲಯಕ್ಕೆ ಹಾಜರಾಗದ ವಿದ್ಯಾರ್ಥಿನಿಯರನ್ನೂ ಹಾಜರಿದ್ದಾರೆಂದು ದಾಖಲಿಸಿರುವ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಿಲಯ ಪಾಲಕಿ ಸೋಫಿಯಾ ಬೇಗಂ ಅವರನ್ನು ಅಮಾನತುಗೊಳಿಸಲು ಸೂಚಿಸಲಾಗಿದೆ.  

ಬೆಟಗೇರಿ ಬಾಲಕರ ವಸತಿ ನಿಲಯದಲ್ಲೂ ಅವ್ಯವಸ್ಥೆ:  

ಬೆಟಗೇರಿ-1ರ ಪೋಸ್ಟ್‌ ಮ್ಯಾಟ್ರಿಕ್ ಅಂಬೇಡ್ಕರ್ ಬಾಲಕರ ವಸತಿ ನಿಲಯದಲ್ಲಿ ಪರೀಶೀಲನೆ ನಡೆಸಿದಾಗ ಕಳಪೆ ಗುಣಮಟ್ಟದ ಆಹಾರ, ಸ್ವಚ್ಛತೆ ಕೊರತೆ, ಕುಡಿಯುವ ನೀರಿನ ಅಭಾವ, ತರಕಾರಿ, ಸೊಪ್ಪು ಹಾಗೂ ಹಾಲಿನ ಸಮರ​‍್ಕ ಬಳಕೆಯಾಗದಿರುವುದು ಕಂಡುಬಂದಿದೆ. ದಿನಸಿ ಮತ್ತು ತರಕಾರಿ ಸ್ವೀಕರಿಸುವಾಗ ನಿಯಮಾನುಸಾರ ತೂಕ ಪರೀಶೀಲಿಸದಿರುವುದು, ಬಿಸೀನೀರಿನ ಬಾಯ್ಲರ್ ದುರಸ್ತಿಯಾಗದಿರುವುದು, ಕೊಠಡಿಗಳ ಕಿಟಕಿ ಹಾಳಾಗಿರುವುದು ಹಾಗೂ ಪಕ್ಕದ ಗಟಾರದಿಂದ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ.  

         ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಹೊಟ್ಟೆತುಂಬಾ ಆಹಾರ ಒದಗಿಸುವುದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಸೇರಿದಂತೆ ಎಲ್ಲ ನ್ಯೂನತೆಗಳನ್ನು ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ನಿಲಯ ಪಾಲಕ ಮಠಪತಿ, ತಾಲೂಕು ಅಧಿಕಾರಿ ಮಂಜುಳಾ ಹಾಗೂ ಮುಂಡರಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉದಯಕುಮಾರ ಉಪಸ್ಥಿತರಿದ್ದರು. 


ಸುದ್ದಿ ಓದಿ