ಗೊಜನೂರು ಗ್ರಾಮದ ಜಿ.ಎಂ.ವಿ.ಎಸ್. ಶಾಲೆಯಲ್ಲಿ ಪ್ರತಿಭಾ ಕಾರಂಜಿಯ ಸಂಭ್ರಮ
ಲೋಕದರ್ಶನ ವರದಿ
ಲಕ್ಷ್ಮೇಶ್ವರ" ತಾಲೂಕಿನ ಗೊಜನೂರು ಗ್ರಾಮದ ಜಿ.ಎಂ.ವಿ.ಎಸ್ ಶಾಲೆಯಲ್ಲಿ ಸನ್ 2026-27- ನೇ ಸಾಲಿನ ಬಟ್ಟೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಂಭ್ರಮದೊಂದಿಗೆ ಜರುಗಿತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಗ್ರಾಮದ ಹಿರಿಯ ಮುಖಂಡರು ಶಿಕ್ಷಣ ಪ್ರೇಮಿಗಳಾದ ಶಿವನಗೌಡ್ರ ಪಾಟೀಲ್ ಮಾಜಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಂಜುನಾಥ್ ಚಲವಾದಿ ಅವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮಹತ್ತರವಾದ ಪ್ರತಿಭಾ ಕಾರಂಜಿಯತ ಹಲವಾರು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸ್ಸನ್ನು ಸದೃಢಗೊಳಿಸಲು ಜಯತುಂಬಿ ಮುನ್ನಡೆಸಲು ಸಹಕಾರಿಯಾಗುತ್ತದೆ. ಸರ್ಕಾರ ಇಂತಹ ಹಲವಾರು ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಜಾರಿಗೊಳಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವದ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು ಕೆಲವೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಅಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆತ್ಮಸ್ಥೈದ ತುಂಬಿ ಅವರನ್ನು ಕ್ರೀಡಾಂಗದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪಟುಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ವಿದ್ಯಾರ್ಥಿಗಳಿಂದ ದೇಶಪ್ರೇಮಿಗಳ ವೇಷ ಭೂಷಣ ಸಾಂಸ್ಕೃತಿಕ ಮತ್ತು ಮನರಂಜನೆಯ ಕಾರ್ಯಕ್ರಮಗಳು ನಡೆದವು ಮಹಾಂತೇಶ ಎಲ್. ಕಲ್ಲೂರ .ಅಧ್ಯಕ್ಷರು ಎಸ್.ಡಿ.ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು ಸಿ.ಎಸ್.ದೊಡ್ಡಗೌಡ್ರ ಮಹಾಂತಗೌಡ್ರ ಪಾಟೀಲ ಸಿದ್ಧಲಿಂಗಪ್ಪ ಸವನೂರು ಎಸ್ ಡಿ. ಎಂ ಸಿ ಸದಸ್ಯರು ಮಂಜುನಾಥ ಪರಸಣ್ಣವರ ಖುರ್ಷಿದಾ ಬೇಗಂ ಮುಲ್ಲಾನವರ್ ಕಾಶವ್ವ ಜಗ್ಗಲ್ ಪುಷ್ಪಾ ಬಡಿಗೇರ.ದ್ಯಾಮವ್ವ ಮೆಣಸಿನಕಾಯಿ ಮಹಾಂತೇಶ ಹರಿಜನ ಶಿಕ್ಷಣ ಸಂಯೋಜಕರು ಆರ್ ಬಿ ಪವಾರ್ ಬಿ.ಎಂ.ಯರಗುಪ್ಪಿ. ನವೀನ ಅಂಗಡಿ ಸಿ ಆರ್ ಪೀ ಬಟ್ಟೂರ. ಗಿರೀಶ್ ನೇಕಾರ. ಭಾರತಿ ಚೌಡಾಪುರ ವಿಶಾಲಾಕ್ಷಿ ಪಿರಂಗಿ. ಎಸ್ ಎ.ಮಸೂತಿ. ಬಿ.ಕೆ. ಹತ್ತಿಕಾಳ ಗೀತಾ ಪೂಜಾರ್ ಎಫ್.ಎಸ್. ತಳವಾರ್ ಎಂ.ಕೆ ಮೇಲಿನಮನಿ ಎಂ.ಎಸ್. ಕಾಳೆ ನಿವೃತ್ತ ಶಿಕ್ಷಕರ ಬಿ. ಎಚ್. ನಡುವಿನಮನಿ ಎಸ್. ಎಚ್. ಬಾಬನ್ನವರ. ಎಸ್.ಆರ್.ಹೊಸಮನಿ ಸೇರಿದಂತೆ ಗ್ರಾಮದ ಗುರು ಹಿರಿಯರು ಶಿಕ್ಷಕರ ವಿದ್ಯಾರ್ಥಿಗಳು ಇದ್ದರು