ಮಕ್ಕಳ ಪ್ರತಿಭೆಗೆ ನೀಡಬೇಕು ಪ್ರೇರಣೆ
ಬ್ಯಾಡಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಯರೇಸಿಮಿ ಹೇಳಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಹೆಣ್ಣು ಮಕ್ಕಳ ಶಾಲೆ ಎಲ್ಲಿ ಸನ್ 2026 ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು.
ಹೆಸರೇ ಸೂಚಿಸುವಂತೆ ಪ್ರತಿಭೆ ಕಾರಂಜಿಯಂತೆ ಚಿಮ್ಮಬೇಕು. ಮಕ್ಕಳ ಪ್ರತಿಭೆಗೆ ಎಲ್ಲರೂ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಬೇಕು. ಆಸ್ತಿ, ಆಭರಣ ಎಂದೂ ಶಾಶ್ವತವಲ್ಲ. ಶಿಕ್ಷಣ ಮಾತ್ರ ಎಂದಿಗೂ ಪ್ರಜ್ವಲಿಸುತ್ತದೆ. ಬಡ ಮಕ್ಕಳಿಗೂ ದ್ವಿಭಾಷೆಯಲ್ಲಿ ಶಿಕ್ಷಣ ದೊರೆಯಬೇಕು ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ಶಫಿ ವಾಲೀಕಾರ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭೆ ಮೂಲಕ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಣ ಅಷ್ಟೇ ಅಲ್ಲ ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಸಮಾಜದಲ್ಲಿ ಉತ್ತಮ ಜೀವನಕ್ಕಾಗಿ ಅನೇಕರು ಹೋರಾಟ ಮಾಡುತ್ತಾರೆ.
ಆದರೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಎಲ್ ಐ ಸಿ ಡೆವಲಪ್ಮೆಂಟ್ ಆಫೀಸರ್ ಝಡ್ ಎಂ ಖಾಜಿ ಮಾತನಾಡಿ ಶಿಕ್ಷಣ ಎಂದರೆ ಕೇವಲ ಓದು, ಬರಹ ಅಲ್ಲ. ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಕ್ರಿಯೆ. ಮಗುವಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ತಿಮ್ಮನಗೌಡ್ರ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಮೀರ ಪಾಷಾ ಹಾವೇರಿ ಉಪನಿರ್ದೇಶಕ ಕಾರ್ಯಾಲಯ.ಮಂಜುರಲಿ ಹಕಿಂ.ಜಿಲ್ಲಾ ಉರ್ದು ಇಸಿಓ ಸಮೀರ್ ಭಾಷಾ. ಶಿಕ್ಷಕರಾದ ಕೊರಗಲ್. ಸಲೀಂ ಮುಲ್ಲಾ. ಹಾಗೂ ಶಾಲೆಯ ಎಲ್ಲ ಮುದ್ದು ಮಕ್ಕಳು ಶಿಕ್ಷಕರ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು ಪಾಲಕರು ಉಪಸ್ಥಿತರಿದ್ದರು.