ಕಾಂಗ್ರೆಸ್ ಸರ್ಕಾರದ ವೈಫಲ್ಯ, ಬೆಲೆ ಏರಿಕೆ ಖಂಡಿಸಿ, ಕಂಪ್ಲಿಯಲ್ಲಿ ಬಿಜೆಪಿ ಪ್ರತಿಭಟನೆ
ಕಂಪ್ಲಿ: ತುಂಗಭದ್ರಾ ಬಲದಂಡೆಯ ಎಲ್ಎಲ್ಸಿ ಮತ್ತು ಎಚ್ಎಲ್ಸಿ ಕಾಲುವೆಗಳಿಗೆ ರೈತರ ಬೆಳೆ ಬರುವತನಕ ಸಮರ್ಕವಾಗಿ ನೀರು ಹರಿಸಬೇಕು. ಮತ್ತು ವಿವಿಧ ಸಾಮಾಗ್ರಿಗಳ ಏರಿಕೆ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ, ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲದಿಂದ ಪಟ್ಟಣದಲ್ಲಿ ಮಾನವ ಸರಪಳಿಯೊಂದಿಗೆ ಗುರುವಾರ ಪ್ರತಿಭಟನೆಯೊಂದಿಗೆ ಸರ್ಕಾರದ ವಿರುದ್ಧ ಹರಿಹಾಯ್ದರು.
ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಈಗಾಗಲೇ ತುಂಗಭದ್ರಾ ಬಲದಂಡೆಯ ಎಲ್ಎಲ್ಸಿ, ಎಚ್ಎಲ್ ಕಾಲುವೆ ಭಾಗದ ಆಶ್ರಯದಲ್ಲಿ ಸಾಕಷ್ಟು ರೈತರು ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದು, ಬೆಳೆಗಾಗಿ ರೈತರು ಕಾದು ಕುಳಿತಿದ್ದು, ರಾಜ್ಯ ಸರ್ಕಾರ ಮಾತ್ರ ರೈತರ ನೀರಿನ ವಿಚಾರದಲ್ಲಿ ಸಮರ್ಕವಾಗಿ ನೀರು ಒದಗಿಸಲು ಹಿಂದೇಟು ಹಾಕುತ್ತಿದೆ.
ಸಾಲ ಸೂಲ ಮಾಡಿ, ಬೆಳೆದ ರೈತರು ಬೆಳೆಗಳು ಬರುವತನ ನೀರಿನ ಲಭ್ಯತೆ ಇದೆ. ಆದರೆ, ಕಾಂಗ್ರೆಸ್ ನೀರು ಕೊಡಲು ಹಿಂದುಮುಂದು ನೋಡುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ರೈತರ ಎರಡು ಬೆಳೆಗಳಿಗೆ ಸಮರ್ಕವಾಗಿ ನೀರು ಒದಗಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ರೈತರು ಪಾಡು ಅತಂತ್ರದಲ್ಲಿ ಸಾಗುವಂತಾಗಿದೆ. ಮತ್ತು ವಿವಿಧ ಸಾಮಾಗ್ರಿಗಳ ಬೆಲೆ ಏರಿಕೆ ಮೂಲಕ ಜನರ ಮೇಲೆ ಸವಾರಿ ಮಾಡುತ್ತಿದೆ. ಇದರಿಂದ ರೈತರ ಮತ್ತು ಜನರು ಜೀವನ ಸಂಕಷ್ಟದಲ್ಲಿ ದೂಡುವಂತೆ ಮಾಡಿದೆ. ಕಾಂಗ್ರೆಸ್ ಆಡಳಿತ ವೈಫಲ್ಯವಾಗಿದೆ ಎಂದು ಗುಡುಗಿದರು.
ನಂತರ ಯುವ ಮುಖಂಡ ಎಸ್.ಚಂದ್ರಶೇಖರಗೌಡ ಮಾತನಾಡಿ, ಸ್ಥಳೀಯ ಶಾಸಕಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕಮಿಷನ್ಗಾಗಿಯೇ ಕೆಲಸಗಳನ್ನು ಮಾಡುತ್ತಿದ್ದಾನೆ ಹೊರತು ಅಭಿವೃದ್ಧಿಗಾಗಿ ಅಲ್ಲ. ರೈತರ ಪರವಾಗಿದ್ದರೆ, ಇಲ್ಲಿನ ಮುನಿರಾಬಾದ್ನಲ್ಲೇ ಐಸಿಸಿ ಸಭೆ ಮಾಡಬಹುದಿತ್ತು. ಆದರೆ, ರೈತರ ಬಾರದಂತಹ ದೂರದ ಬೆಂಗಳೂರಿನಲ್ಲಿ ಸಭೆ ನಡೆಸಿ, ತಮಗೆ ಬೇಕಾದ ನಿರ್ಧಾರಗಳನ್ನು ಕೈಗೊಂಡು, ರೈತರಿಗೆ ಅನ್ಯಾಯ ಮತ್ತು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ಎಸ್.ಎಂ. ನಾಗರಾಜ, ಟಿ.ವಿ.ಸುದರ್ಶನರೆಡ್ಡಿ, ಎನ್.ರಾಮಾಂಜೀನೀಯಲು, ಮುಖಂಡರಾದ ಅಳ್ಳಳ್ಳಿ ವಿರೇಶ, ಅಗಳಿ ಪಂಪಾಪತಿ, ಹೂವಣ್ಣ, ಬಿ.ದೇವೇಂದ್ರ, ಕರಿಬಸಯ್ಯಸ್ವಾಮಿ, ಗುರುರಾಜ, ಬಡಿಗೇರ ವಿರೇಶ, ಸಿ.ಎ.ಚನ್ನಪ್ಪ, ಇಟಗಿ ವೆಂಕಟೇಶ, ಅನಿಲ್ ಕುಮಾರ, ನಾಗರಾಜ, ಸಣ್ಣ ಹುಲುಗಪ್ಪ ಸೇರಿದಂತೆ ಅನೇಕರಿದ್ದರು.