ಕಾರವಾರ

ವಾಹನ ವಾಯುಮಾಲಿನ್ಯ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

ವಾಹನ ವಾಯುಮಾಲಿನ್ಯ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ 

       ಕಾರವಾರ 18 : ಪ್ರಾದೇಶಿಕ ಸಾರಿಗೆ ಕಚೇರಿ ಕಾರವಾರ ಹಾಗೂ ಎ.ಪಿ.ಡಿ ಫೌಂಡೇಶನ್ ಮಂಗಳೂರು ಇವರ ಸಹಭಾಗಿತ್ವದಲ್ಲಿ, ಕಾರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಹನ ವಾಯುಮಾಲಿನ್ಯ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮದಲ್ಲಿ ಎ.ಪಿ.ಡಿ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಸೂರ್ಯ ನಾರಾಯಣ ಓಟೆಪಡ್ವು ಮಾತನಾಡಿ,                       ಮನುಷ್ಯನ ಬದುಕಿಗೆ ಶುದ್ಧ ಗಾಳಿ ಮತ್ತು ಆಮ್ಲಜನಕ ಅತ್ಯಂತ ಅಗತ್ಯ. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಮಣ್ಣಿನ ಮಾಲಿನ್ಯದಿಂದ ಪರಿಸರದ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ವಾಹನಗಳಿಂದ ಹೆಚ್ವಾಗಿ ಪರಿಸರ ಮಾಲಿನ್ಯವಾಗುತ್ತಿದ್ದು, ಪ್ರಕೃತಿಯಿಂದ ದೊರೆಯುವ ಶುದ್ಧ ಗಾಳಿಯ ಮಹತ್ವವನ್ನು ಅರಿತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೂ ಉತ್ತಮ ಪರಿಸರ ದೊರಕಿಸಬೇಕು ಎಂದರು. 

             ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಹೆಚ್ಚಾಗುತ್ತಿದೆ. ವಾಹನ ಸವಾರರು 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿಯಮಾನುಸಾರ ಗುಜರಿಗೆ ಹಾಕಬೇಕು. ವಾಹನಗಳನ್ನು ಸಮರ​‍್ಕವಾಗಿ ನಿರ್ವಹಿಸುವುದು, ನಿಗದಿತ ಅವಧಿಯಲ್ಲಿ ಮಾಲಿನ್ಯ ತಪಾಸಣೆ ಮಾಡಿಸುವುದು, ಅನಗತ್ಯವಾಗಿ ವಾಹನಗಳನ್ನು ಚಾಲನೆಯಲ್ಲಿಡುವುದನ್ನು ಹಾಗೂ ಅತಿಯಾದ ಶಬ್ದ ಮಾಡುವುದನ್ನು ತಪ್ಪಿಸಬೇಕು.

           ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ವಿದ್ಯಾ ಕವರಿ, ಆರ್‌.ಟಿ.ಓ ಕಚೇರಿ ಸಿಬ್ಬಂದಿಗಳಾದ ಶಿವಾಜಿ ಶಿಂಧೆ, ವಿದ್ಯಾ, ಎ.ಪಿ.ಡಿ ಫೌಂಡೇಶನ್ ಸಂಯೋಜಕಿ ಗೀತಾ ಸೂರ್ಯ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. 


ಸುದ್ದಿ ಓದಿ