ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಬೆಳೆಸ ಬೇಕು -ಮೀನಾಕ್ಷಿ ಬಣ್ಣದ ಭಾವಿ
ಕೊಪ್ಪಳ 18: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ ಮತ್ತು ಸೃಜನಶೀಲತೆ ಬೆಳೆಸಬೇಕು ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು,
ಅವರು ಕ್ಲಬ್ಬಿನ ದತ್ತಕ ಶಾಲೆ ಯಾಗಿರುವ ತಾಲೂಕಿನ ದದೆಗಲ್ ಗ್ರಾಮ ದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಏರಿ್ಡಸಿದ ಚಿತ್ರಕಲೆ ,ರಂಗೋಲಿ, ನೃತ್ಯ, ಗಾಯನ ,ಕಥೆ ಹೇಳುವುದು, ಫ್ಯಾನ್ಸಿ ಡ್ರೆಸ್, ರಸಪ್ರಶ್ನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹದಾಯಕವಾಗಿ ಆಟೋಪಕರಣ , ಪಿಟೋಪಕರಣ ಮತ್ತು ಅಡುಗೆ ಸಾಮಗ್ರಿ ಗಳನ್ನು ಅಲ್ಲದೆ ಬಹುಮಾನ ವಿತರಣೆ ಮಾಡಿ ಏರಿ್ಡಸಿದ ಸರಳ ಸಾಂಕೇತಿಕ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದರು,
ಮುಂದುವರಿದು ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಬೆಳೆಸಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಬೆಳೆಸುವಂತಹ ಕೆಲಸ ಶಿಕ್ಷಕರು ಮಾಡಬೇಕು ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ, ನಮ್ಮ ದೇಶದ ಸಾಂಸ್ಕೃತಿ, ಪರಂಪರೆ ,ಮಹಾನ್ ನಾಯಕರುಗಳ ಆದರ್ಶಗಳನ್ನು ಅವರಿಗೆ ತಿಳಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದ ಅವರು ಮಕ್ಕಳಿಗಾಗಿ ಸಹಾಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದ ಕ್ಲಬ್ಬಿನ ಪದಾಧಿಕಾರಿಗಳೆಲ್ಲರಿಗೂ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಅಭಿನಂದಿಸಿದರು,
ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಶ್ರೀದೇವಿ ಪಾಟೀಲ್, ಎಡಿಟರ್ ಮಾಲಾ ,ಐ ಎಸ್ ಓ ,ಲತಾ ಪಟ್ಟಣಶೆಟ್ಟಿ, ಉಪಸ್ಥಿತರಿದ್ದು ಶರಣಮ್ಮ ಪಾಟೀಲ್ ರವರು ಶಾಲೆಗೆ ಸ್ಪೀಕರ್ ಸೆಟ್ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲೆಗೆ ದೇಣಿಗೆಯಾಗಿ ನೀಡಿದರೆ, ಕೋಮಲ ಕುದುರಿಮೋತಿ ಯವರು ಶಾಲೆಗೆ ಸ್ಟೀಲ್ಸ ಪ್ಲೇಟ್ ಮತ್ತು ನೀರಿನ ಗ್ಲಾಸ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು, ತ್ರಿಶಾಲಾ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಸುಮಂಗಳ ರವರು ಇದೇ ವೇಳೆ ಮೆಡಿಟೇಶನ್, ಯೋಗ, ಧ್ಯಾನ, ಪ್ರಾಣಾಯಾಮ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಜಾಗೃತಿ ಪಡಿಸಿದರು, ಶಾಲೆಗೆ ನೀಡಿದ ಕ್ಲಬ್ಬಿನ ಸಹಾಯ ಸಹಕಾರಗಳ ಬಗ್ಗೆ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಅಲ್ಲದೆ ವಿದ್ಯಾರ್ಥಿಗಳ ಪಾಲಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು,