ಕೊಪ್ಪಳ

ಗವಿಶಂಕರಗೆ ಕೌಶಲ್ಯ ಕರ್ನಾಟಕ ಶೃಂಗಸಭೆಯ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿಯ ಗರಿ

ಗವಿಶಂಕರಗೆ ಕೌಶಲ್ಯ ಕರ್ನಾಟಕ ಶೃಂಗಸಭೆಯ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿಯ ಗರಿ

ಕೊಪ್ಪಳ 15: ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಗವಿ ಶಂಕರ್ ರವರಿಗೆ ಪ್ರಸಕ್ತ 2026 ನೇ ಸಾಲಿನ ರಾಜ್ಯಮಟ್ಟದ ಕೌಶಲ್ಯ ಕರ್ನಾಟಕ ಸಂಘ ಸಭೆಯ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.  ಕರ್ನಾಟಕ ಸರ್ಕಾರದವತಿಯಿಂದ  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಜ್ಯದ ಕೌಶಲ್ಯ ತರಬೇತಿ ಸಂಸ್ಥೆಗಳ ಪ್ರಾಚಾರ್ಯರ  ನಾಯಕತ್ವ ಮತ್ತು ಆಡಳಿತಾತ್ಮಕ ಸಾಧನೆಯನ್ನು ಗುರುತಿಸಿ ಕೊಡಲ್ಪಡುವ ಕೌಶಲ್ಯ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು  ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಿಲಾಗಿತ್ತು.  ರಾಜ್ಯದ ಸರಕಾರಿ ಐಟಿಐ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡುವಲ್ಲಿ ತೋರಿದ ಬದ್ದತೆ ಹಾಗೂ ಶೈಕ್ಷಣಿಕ ಮತ್ತು ಕೌಶಲ್ಯಾಭಿವೃದ್ದಿ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯ ನಿರ್ವಹಣೆಯ ಜೊತೆಗೆ ತರಬೇತಿ ವಿಧಾನದಲ್ಲಿನ ನಾವೀನ್ಯತೆ ಕಂಡುಕೊಳ್ಳಲು ಸಾಂಪ್ರದಾಯಿಕ ಭೋಧನಾ ಕ್ರಮದ ಬದಲಾಗಿ ಆಧುನಿಕ ತಂತ್ರಜ್ಞಾನ, ಪ್ರಾಯೋಗಿಕ ಕಲಿಕೆ, ಮತ್ತು ಡಿಜಿಟಲ್ ಉಪಕರಣಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ  ಗುಣಮಟ್ಟದ ತರಬೇತಿ ನೀಡುವದರ ಜೊತೆಗೆ ಉದ್ಯೋಗ ಅವಕಾಶಗಳ ಸೃಷ್ಟಿಸುವ ಮಹತ್ತರ ಜವಾಬ್ದಾರಿಯೊಂದಿಗೆ ಕೈಗಾರಿಕೆಗಳೊಂದಿಗೆ ನೇರ ಸಂಪರ್ಕ ಹಾಗೂ ಸರಕಾರಿ ಯೋಜನೆಗಳ ಸಮರ​‍್ಕ ಅನುಷ್ಠಾನದ ಬಳಕೆ ಹಾಗೂ ವಿಶೇಷವಾಗಿ ಮಹಿಳಾ ಮತ್ತು ಗ್ರಾಮೀಣ ಸಬಲೀಕರಣ ಅಡಿಯಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮಾರ್ಗದರ್ಶನ ನೀಡುತ್ತಾ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೌಶಲ್ಯ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಗೆ ಭಾಗವಹಿಸಲು ಪ್ರೊತ್ಸಾಹಿಸುತ್ತಿದ್ದರು.  

ಕೊಪ್ಪಳ  ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ  ಗವಿಶಂಕರ ಸರ್ ಅವರ ಉತ್ತಮ ಸೇವೆಯನ್ನು ಪರಿಗಣಿಸಿ  2026ನೇ ಸಾಲಿನ ಕೌಶಲ್ಯ ಕರ್ನಾಟಕ ಶೃಂಗಸಭೆಯಲ್ಲಿ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿಯನ್ನು  ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ರವರು ಪ್ರಶಸ್ತಿ  ನೀಡಿ ಗೌರವಿಸಿ ಅಭಿನಂದಿಸಿದರು. 


ಸುದ್ದಿ ಓದಿ