ಕೊಪ್ಪಳ

ಎಚ್ ಡಿ ಎಫ್ ಸಿ ಜೀವ ವಿಮೆ ಕೊಪ್ಪಳ ಉಪ ಶಾಖೆ ಕಚೇರಿಯಲ್ಲಿ ಲಕ್ಷ್ಮಿ ಪೂಜಾ ಕಾರ್ಯಕ್ರಮ

ಎಚ್ ಡಿ ಎಫ್ ಸಿ ಜೀವ ವಿಮೆ ಕೊಪ್ಪಳ ಉಪ ಶಾಖೆ ಕಚೇರಿಯಲ್ಲಿ ಲಕ್ಷ್ಮಿ ಪೂಜಾ ಕಾರ್ಯಕ್ರಮ

             ಕೊಪ್ಪಳ 11 ; ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಎಚ್ ಡಿ ಎಫ್ ಸಿ, ಜೀವ ವಿಮೆ  ಕೊಪ್ಪಳ ಉಪ ಶಾಖೆ ಕಚೇರಿಯಲ್ಲಿ ವಿಶೇಷ ಲಕ್ಷ್ಮಿ ಪೂಜಾ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಮತ್ತು ಭಕ್ತಿ ಭಾವದಿಂದ ಆಚರಿಸಲಾಯಿತು,  ಎಚ್ ಡಿ ಎಫ್ ಸಿ, ಜೀವ ವಿಮೆ ಪಾಲಸಿ ಶಾಖೆ ಕಚೇರಿ ಗದುಗಿನ ವ್ಯವಸ್ಥಾಪಕರಾದ ಶಿವಲಿಂಗೇಶ್ ಹಿರೇಮಠ ರವರ ಸೂಚನೆ ಮತ್ತು ಅವರ ಮಾರ್ಗದರ್ಶನದಲ್ಲಿ ಬುಧವಾರದಂದು ಲಕ್ಷ್ಮೀದೇವಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು,

             ಈ ಸಂದರ್ಭದಲ್ಲಿ ಎಚ್ ಡಿ ಎಫ್ ಸಿ ಕೊಪ್ಪಳ ಉಪ ಶಾಖೆಯ ವ್ಯವಸ್ಥಾಪಕಿ ಪೀರಮಾ ನದಾಫ್, ಪಾಲುದಾರರಾದ ದೊಡ್ಡಯ್ಯ ಹಿರೇಮಠ, ಬಸವರಾಜ್ ಶೀಘನಳ್ಳಿ,  ಶಾಂತಯ್ಯ ಗಡ್ಡಿಮಠ,  ಕಾಮಣ್ಣ,ಗೀತಾ ಪಾಟೀಲ್, ಪ್ರತಿಮಾ ಪಟ್ಟಣಶೆಟ್ಟಿ, ಕವಿತಾ , ಪಿ, ಸಲಹೆಗಾರರಾದ ಗಂಗಾಧರಯ್ಯ ಹಿರೇಮಠ್, ಸೈಯದ್ ಸಾಧಿಕ್ ಹುಸೇನ್, ಗಾಯತ್ರಿ ಭೂತಾ, ನಾಗರತ್ನ ಬನ್ನಿ ಕೊಪ್ಪ, ದೀಪಾ ಸುನಿಲ್, ಭದರೇಶ್ ಕುಮಾರ್, ರಾಘವೇಂದ್ರ ಡಿ, ಬಿ,ಐಶ್ವರ್ಯ, ಸಾಧಿಕ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,

           ವಿಶೇಷ ಪೂಜಾ ಕಾರ್ಯಕ್ರಮದ ನಂತರ ಏರಿ​‍್ಡಸಿದ ಸರಳ ಸಾಂಕೇತಿಕ ಸಮಾರಂಭದಲ್ಲಿ ಬಹುತೇಕ ಎಲ್ಲರೂ ಮಾತನಾಡಿ ಸಂಸ್ಥೆಯ ಅಭಿವೃದ್ಧಿ ಹಾಗೂ ವಿಮೆ ಮಾಡುವ ಗ್ರಾಹಕ ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಸಿಗಬಹುದಾದ ಸಹಾಯ ಸೌಕರ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಮತ್ತು ಹೆಚ್ಚು ವಿಮೆ ಮಾಡುವುದರ ಜೊತೆಗೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಿಳಿಸಿದರು ಹಾಗೂ ಪರಸ್ಪರ ದೀಪಾವಳಿ ಹಬ್ಬದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು. 


ಸುದ್ದಿ ಓದಿ