ಕೊಪ್ಪಳ

75 ಹಿರಿಯ ನಾಗರಿಕರ ಹುಟ್ಟು ಹಬ್ಬದ ಅಮೃತ ಮಹೋತ್ಸವ

75 ಹಿರಿಯ ನಾಗರಿಕರ ಹುಟ್ಟು ಹಬ್ಬದ ಅಮೃತ ಮಹೋತ್ಸವ

 

ಕುಕನೂರು ಅ 29: ಕೊಪ್ಪಳ ಜಿಲ್ಲೆಯ ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀ ಮ ನಿ ಪ್ರ ಡಾ. ಮಹಾದೇವ ಮಹಾಸ್ವಾಮಿಗಳ 37ನೇ ವರ್ಷದ ಜನ್ಮದಿನದ ಅಂಗವಾಗಿ ನವೆಂಬರ್ 1ರಂದು ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ 75 ವರ್ಷ ತುಂಬಿದ 75 ಹಿರಿಯ ನಾಗರಿಕರಿಗೆ ಅಮೃತ ಮಹೋತ್ಸವ ಸನ್ಮಾನ ನೆರವೇರಿಸಲಾಗುವುದು. ಹಿರಿಯರ ಜೀವನಾನುಭವ, ಸಮಾಜಕ್ಕೆ ಅವರು ನೀಡಿದ ಕೊಡುಗೆ ಹಾಗೂ ಅವರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಅಂಗವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದ್ದು, ಅಗತ್ಯವಿರುವವರಿಗೆ ನೇತ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ತುಲಾಭಾರ ಕಾರ್ಯಕ್ರಮ ಹಾಗೂ ಭಕ್ತರು ಮತ್ತು ಸಾರ್ವಜನಿಕರಿಗಾಗಿ ಮಹಾದಾಸೋಹವೂ ಜರುಗಲಿದೆ.ಕಾರ್ಯಕ್ರಮದಲ್ಲಿ  ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ತುಲಾಭಾರ, ಮಹಾ ದಾಸೋಹ ಹಾಗೂ  ಕವಿ ರವಿ ಎಸ್‌. ಹಿರೇಮನಿ ಅವರು ರಚಿಸಿರುವ ‘ಅಕ್ಷರ ಅಂಕುರ’ ಕವನ ಸಂಕಲನದ ಲೋಕಾರೆ​‍್ಣ ಹಾಗೂ ಕವಿಗೋಷ್ಠಿ ನಡೆಯಲಿದೆ.

ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಕುಕನೂರಿನ ಶ್ರೀ ಮ ನಿ ಪ್ರ ಡಾ. ಮಹಾದೇವ ಮಹಾಸ್ವಾಮಿಗಳ ಜನ್ಮದಿನವನ್ನು ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಆಚರಿಸಲಾಗುತ್ತಿದ್ದು, ಹಿರಿಯ ನಾಗರಿಕರ ಸನ್ಮಾನ, ಅವರ ಜನ್ಮ ದಿನಾಚರಣೆ, ಆರೋಗ್ಯ ಸೇವೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನದಾಸೋಹದ ಮೂಲಕ ಸಮಾಜದಲ್ಲಿ ಸೇವೆ, ಮಾನವೀಯತೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸುವ ಆಶಯ ಹೊಂದಲಾಗಿದೆ.

ಸಮಾರಂಭದಲ್ಲಿ ಗಣ್ಯರು, ಸಾಹಿತಿಗಳು, ಕಲಾವಿದರು, ಭಕ್ತರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಲಿದ್ದು, ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಮ್ ಎಸ್ ಚಾರಿಟೇಬಲ್ ಟ್ರಸ್ಟ್‌ ನ ಸಂಚಾಲಕರಾದ ಪ್ರಭು ಶಿವಶಿಂಪರ ಮತ್ತು ಸಂಘಟಕರು ಮನವಿ ಮಾಡಿದ್ದಾರೆ. 


ಸುದ್ದಿ ಓದಿ