ಮೆಟ್ರಿ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಹೆಚ್.ನಾಗರಾಜ ಆಯ್ಕೆ
ಲೋಕದರ್ಶನ ವರದಿ
ಕಂಪ್ಲಿ 29: ತಾಲೂಕಿನ ಮೆಟ್ರಿ ಗ್ರಾಮದ ಪಿಎಂಶ್ರೀ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿಯ ನೂತನ ಅಧ್ಯಕ್ಷರಾಗಿ ಹೆಚ್.ನಾಗರಾಜ ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಶಾಲೆಯಲ್ಲಿ ಗುರುವಾರ ನಡೆದ ಎಸ್ಡಿಎಂಸಿ ಆಡಳಿತ ಮಂಡಳಿಯ ಸಭೆಯಲ್ಲಿ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಎಸ್ಡಿಎಂಸಿ ಸದಸ್ಯರ ಒಮ್ಮತದ ನಿರ್ಧಾರದಿಂದಾಗಿ ಹೆಚ್.ನಾಗರಾಜ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರ ನೂತನ ಅಧ್ಯಕ್ಷ ಸ್ಥಾನಕ್ಕೆ ಹೆಚ್.ನಾಗರಾಜ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಮತ್ತು ಕಂಪ್ಲಿ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಚಾರ್ಯೆ ಸುಜಾತ ಅವರು ಘೋಷಿಸಿದರು. ತದನಂತರ ನೂತನ ಅಧ್ಯಕ್ಷರಿಗೆ ಶಾಲಾ ಶಿಕ್ಷಕರು, ಆಡಳಿತ ಮಂಡಳಿಯವರು, ಸ್ಥಳೀಯ ಮುಖಂಡರು ಮಾಲಾರೆ್ಣ ಮಾಡುವ ಮೂಲಕ ಶುಭ ಹಾರೈಯಿಸಿದರು. ನೂತನ ಅಧ್ಯಕ್ಷ ಹೆಚ್.ನಾಗರಾಜ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಸಕಾಲದಲ್ಲಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು.
ಮತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದರು. ಈ ಸಂದರ್ಭದಲ್ಲಿ ಇಸಿಒ ರೇವಣ್ಣ, ಸಿಆರ್‌ಪಿ ಪ್ರಭಾಕರ, ಪ್ರಭಾರಿ ಮುಖ್ಯಶಿಕ್ಷಕಿ ರೇಖಾ, ಎಸ್ಡಿಎಂಸಿ ಉಪಾಧ್ಯಕ್ಷೆ ಅಂಬಿಕ, ಸದಸ್ಯರು, ಶಿಕ್ಷಣ ಸುಧಾರಣ ಸಮಿತಿ ಸದಸ್ಯರಾದ ಹೆಚ್.ಕುಮಾರಸ್ವಾಮಿ, ಹರಿಜನ ಜಗದೀಶ, ಜಡಿಯಪ್ಪ, ಸ್ವಾಮಿ, ನಾಗೇಂದ್ರ, ಬಸವರಾಜ, ನಾಗಲಿಂಗ, ಚೇತನ್, ಪ್ರತಾಪ, ಸಣ್ಣಮಲ್ಲಿ ಸೇರಿದಂತೆ ಶಿಕ್ಷಕರು ಇದ್ದರು.