ಕಂಪ್ಲಿ

ನ.1ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವಕ್ಕೆ ನಿರ್ಧಾರ

ನ.1ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವಕ್ಕೆ ನಿರ್ಧಾರ

ಲೋಕದರ್ಶನ ವರದಿ 

           ಕಂಪ್ಲಿ 27 : ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು.  ಇಲ್ಲಿನ ಕಛೇರಿಯಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬಂತೆ ಪ್ರತಿಯೊಂದು ಹಂತದಲ್ಲಿ ಕನ್ನಡತನವನ್ನು ಬೆಸೆಯುವ ಜೊತೆಗೆ ಕನ್ನಡಾಂಬೆಯ ಪೂಜೆ ಮಾಡಿ ಆರಾಧಿಸಬೇಕಾಗಿದೆ.

             ಆ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನ.1ರಂದು ಕೂಡ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇಲ್ಲಿನ ತಾಲೂಕಿನ ಸರ್ಕಾರಿ ಕಛೇರಿ, ಶಾಲಾ-ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಭಾರಿ ಉಪ ತಹಶೀಲ್ದಾರ್ ರಮೇಶ, ಕಂದಾಯ ನೀರೀಕ್ಷಕ ಸುರೇಶ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಬೂದಗುಂಪಿ ಅಂಬಣ್ಣ, ವಿವಿಧ ಇಲಾಖೆ ಅಧಿಕಾರಿಗಳಾದ ಕೆ.ವಿರುಪಾಕ್ಷಿ, ಗುರುರಾಜ, ಗಾದಿಲಿಂಗಪ್ಪ, ಟಿ.ಎಂ.ಬಸವರಾಜ, ಬಸವರಾಜ, ಜ್ಯೋತಿ, ಪಿಡಿಒಗಳಾದ ಮಲ್ಲಿಕಾರ್ಜುನ, ಹಾಲರಿ​‍್ವ ಶೇಷಗಿರಿ, ಶಿಲ್ಪರಾಣಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ