ರಾಯಬಾಗ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿವಸೇನೆಯಿಂದ ತಹಸೀಲ್ದಾರ್ಗೆ ಮನವಿ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿವಸೇನೆಯಿಂದ ತಹಸೀಲ್ದಾರ್ಗೆ ಮನವಿ


       ರಾಯಬಾಗ 29: ಬರ ಪರಿಸ್ಥಿತಿಯಿಂದ ತತ್ತರಿಸಿದ ರೈತರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಶಿವಸೇನಾ ಮುಖಂಡರು ಗ್ರೇಡ 2 ತಹಸೀಲ್ದಾರ ಡಿ.ಎಸ್‌.ಜಮಾದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಕಷ್ಟದಲ್ಲಿರುವ ರೈತರಿಗೆ ಶಿವಸೇನಾ ಕರ್ನಾಟಕ ಪಕ್ಷದ ಸಂಪೂರ್ಣ ಬೆಂಬಲವಿದ್ದು, ರೈತರಿಗೆ ನ್ಯಾಯ ಸಿಗುವವರೆಗೂ ತಮ್ಮ ಜೊತೆಗೆ ನಿಂತು ಹೋರಾಟ ಮಾಡಲಾಗುವುದು.

      ಮಳೆ ಕೊರತೆ ಹಾಗೂ ಇತರ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಎಕರೆಗೆ ರೂ.50 ಸಾವಿರ ವರೆಗೆ ಪರಿಹಾರ ನೀಡಬೇಕು, ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ರೈತರ ಜಮೀನುಗಳಿಗೆ ಸಮರ​‍್ಕ ನೀರು ಪೂರೈಸಬೇಕು,  ಕೃಷಿಗೆ ದಿನಕ್ಕೆ ಹನ್ನೆರಡು ಗಂಟೆಗಳ ವಿದ್ಯುತ್ ಪೂರೈಕೆಯನ್ನು ಖಚಿತ ಪಡಿಸಬೇಕು, ರೈತರಿಗೆ ಅಗತ್ಯ ರಸಗೊಬ್ಬರ ಮತ್ತು ಗುಣಮಟ್ಟದ ಬೀಜಗಳನ್ನು ಸಕಾಲದಲ್ಲಿ ಪೂರೈಸಬೇಕು,

             ರೈತರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳ ಈಡೇರತಿಗೆ ಕಾಲು ಮಿತಿಯ ಕ್ರಮ ಯೋಜನೆ ಪ್ರಕಟಿಸಬೇಕು, ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆಗೆಯಲು ವ್ಯವಸ್ಥೆ ಮಾಡಬೇಕು, ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು. ಸರಕಾರವು ರೈತರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು.

             ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೆ ಶಿವಸೇನಾ ಕರ್ನಾಟಕ ಪಕ್ಷವು ರೈತರ ನ್ಯಾಯಯುತ ಹಕ್ಕುಗಳ ಪರವಾಗಿ ಕಾನೂನು ಬದ್ಧ ಮತ್ತು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಿದರು. ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ರಮೇಶ ಪವಾರ, ಶ್ರಿನಾಥ ಜಾಧವ, ಶಿವಾಜಿ ಹವಾಲ್ದಾರ, ಕಿರಣ ಶಿಂಧೆ, ಸುನಿಲ ಕಾಳೆ, ಗಂಗಾರಾಮ ಪವಾರ, ಮಮಹಾಂತೇಶ ಲೋಹಾರ, ಸುನಿಲ ಕುಲಗುಡೆ, ಸೂರಜ ಭಾಕರೆ, ಉದಯ ಕುಂಬಾರ, ರವಿ ಬಡಿಗೇರ, ರಾಹುಲ ಗಡ್ಡೆ, ಕಿರಣ ಪಿತಾಂಬರೆ, ಸಿದ್ದು ಬಂತೆ, ಅಭಿ ನಾವಿ, ವಿವೇಕ ಪೂಜಾರಿ ಸೇರಿ ಅನೇಕರು ಇದ್ದರು. 


ಸುದ್ದಿ ಓದಿ