ರಾಯಬಾಗ

ಮಕ್ಕಳ ಸುರಕ್ಷತೆಗೆ ಕಾನೂನುಗಳ ಅರಿವು ಅಗತ್ಯ: ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ

ಮಕ್ಕಳ ಸುರಕ್ಷತೆಗೆ ಕಾನೂನುಗಳ ಅರಿವು ಅಗತ್ಯ: ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ

ರಾಯಬಾಗ 28 : ಮಕ್ಕಳ ರಕ್ಷಣೆಗಾಗಿ ಪೋಸ್ಕೊ ಕಾಯ್ದೆ ಸೇರಿಂದತೆ ಅನೇಕ ಕಠಿಣ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು. ಬುಧವಾರ ತಾಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಬಚಪನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿದ್ದು, ಅವುಗಳ ಬಗ್ಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಅರಿವು ಹೊಂದಿರಬೇಕು. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ತಿಳಿಸಿ ಕೊಡಬೇಕೆಂದರು. ಬಿಇಒ ಬಸವರಾಜಪ್ಪ ಆರ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌.ಕೋಟಿವಾಲೆ, ಸಹ ಕಾರ್ಯದರ್ಶಿ ಎಮ್‌.ಬಿ.ಬಂತಿ, ವಕೀಲರಾದ ಸುಧಾ ತರಾಳ, ಮುಖ್ಯೋಪಾಧ್ಯಾಯಿನಿ ಎಮ್‌.ಕೆ.ಕಾಂಬಳೆ, ಬಿ.ವಿ.ಪೂಜೇರಿ, ಆರಿ​‍್ವ.ಜಲಪೂರ, ರಾಜೇಂದ್ರಕುಮಾರ ತೆಲಸಂಗ, ಎಸ್‌.ಎ.ಬಾಬನ್ನವರ, ಬಿ.ಎನ್‌.ಅಜಗೋಳ ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ