ಯರಗಟ್ಟಿ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

         ಯರಗಟ್ಟಿ 28 : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಹಾಗೂ ಅದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಸುರಕ್ಷಿತ ಬಚಪನ್ ಅಭಿಯಾನ್‌’ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶ ಕೃಷ್ಣಪ್ಪ ಪಮ್ಮಾರ ಹೇಳಿದರು. ಮಕ್ಕಳ ಮೇಲಿನ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳು ಸಂಭವಿಸಿದಲ್ಲಿ ಭಯಪಡದೆ ಪಾಲಕರು, ಶಿಕ್ಷಕರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.

         ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಸುರಕ್ಷಿತ ಬಚಪನ್ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳ ಸುರಕ್ಷತೆ, ಬಾಲ್ಯದಲ್ಲಿಯೇ ಕಾನೂನಿನ ಅರಿವು, ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ನಡುವಿನ ವ್ಯತ್ಯಾಸ, ಲೈಂಗಿಕ ಕಿರುಕುಳದಿಂದ ರಕ್ಷಿಸಿಕೊಳ್ಳುವ ವಿಧಾನಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ದೂರು ನೀಡಬಹುದು ಎಂದು ಹೇಳಿದರು. ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಅತ್ಯಗತ್ಯ ಎಂದು ತಿಳಿಸಲಾಯಿತು.

           ಪಿಎ ಎಲ್ ಬಿ ಮಾಳಿ ಮಾತನಾಡಿದ ಅವರು ಪೋಕ್ಸೋ ಕಾಯ್ದೆಯ ಪ್ರಮುಖ ಅಂಶಗಳು, ಅಪರಾಧಗಳಿಗೆ ವಿಧಿಸಲಾಗುವ ಶಿಕ್ಷೆಗಳು, ದೂರು ದಾಖಲಿಸುವ ವಿಧಾನ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕುರಿತು ಮಾಹಿತಿ ನೀಡಲಾಯಿತು.ಮಕ್ಕಳ ಸುರಕ್ಷತೆಯೇ ಸಮಾಜದ ಆದ್ಯತೆಯಾಗಬೇಕು. ಪ್ರತಿಯೊಬ್ಬ ಮಗುವಿಗೂ ಭಯಮುಕ್ತ, ಸುರಕ್ಷಿತ ಮತ್ತು ಗೌರವಯುತ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ ಎಂದು ಹೇಳಿದರು.

             ಈ ವೇಳೆ ಮರಡಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್‌. ಜಿ. ದೇವರಡ್ಡಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆಯ್‌. ಬಿ. ಗೌಡರ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಡಿ. ಎ. ಜಮಾದಾರ, ಉಪನ್ಯಾಸಕರಾದ ಎಫ್‌. ಬಿ. ಹಟ್ಟಿ, ನ್ಯಾಯವಾದಿಗಳಾದ ಸ್ವಾತಿ ಯಲ್ಲಪ್ಪನವರ, ಆರ್‌. ಎಸ್‌. ಆಲದಕಟ್ಟಿ, ಸಿ.ಆರ್‌.ಪಿ. ವಸಂತ ಬಡಿಗೇರ, ಶಾಲಾ ಮುಖ್ಯ ಶಿಕ್ಷಕ ಬಿ ಎಸ್ ಆಲದಕಟ್ಟಿ, ಎನ್‌. ಎಸ್‌. ಕಾಂಬಳೆ, ಎಮ್‌. ಎಸ್‌. ಗುಗ್ಗರನಟ್ಟಿ, ಆರ್‌. ಬಿ. ಗಾಣಗೇರ, ಜಿ. ಅಯ್‌. ಡಮ್ಮಣಗಿ, ವಾಯ್‌. ಬಿ. ನಾಯ್ಕರ ಸೇರಿದಂತೆ ಶಾಲಾ ಶಿಕ್ಷಕ, ಶಿಕ್ಷಕಿಯರು ಇದ್ದರು. 


ಸುದ್ದಿ ಓದಿ