ಯರಗಟ್ಟಿ

ರಕ್ಷಾ ರಾಮಯ್ಯ ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆಗೆ ಎರಡು ಗ್ರೀನ್ ಬೋರ್ಡ್‌ಗಳ ಕೊಡುಗೆ

ರಕ್ಷಾ ರಾಮಯ್ಯ ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆಗೆ ಎರಡು ಗ್ರೀನ್ ಬೋರ್ಡ್‌ಗಳ ಕೊಡುಗೆ

ಲೋಕದರ್ಶನ ವರದಿ 

         ಯರಗಟ್ಟಿ 27 :  ಎಐಸಿಸಿ ಸದಸ್ಯರಾದ ರಕ್ಷಾ ರಾಮಯ್ಯ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ಎರಡು ಗ್ರೀನ್ ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಯಿತು. ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಸುಗಮಗೊಳಿಸುವುದು, ತರಗತಿಗಳಲ್ಲಿ ಬೋಧನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಸುವುದು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಗ್ರೀನ್ ಬೋರ್ಡ್‌ಗಳನ್ನು ನೀಡಲಾಗಿದೆ.

          ಈ ಶೈಕ್ಷಣಿಕ ಸೇವಾ ಕಾರ್ಯಕ್ಕೆ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ ನೀಡುವ ಕೊಡುಗೆ ಸಮಾಜದ ಭವಿಷ್ಯಕ್ಕೆ ನೀಡುವ ಅಮೂಲ್ಯ ಕಾಣಿಕೆಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ದಾನಿಗಳು ಹಾಗೂ ಸಮಾಜದ ಗಣ್ಯರು ಕೈಜೋಡಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಹಕಾರಿಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಶಾಲೆಗೆ ಎರಡು ಗ್ರೀನ್ ಬೋರ್ಡ್‌ಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಿಕೆಪಿಎಸ್ ಅಧ್ಯಕ್ಷ ಪ್ರಜ್ವಲ್ ಬಿರಾದಾರಗೌಡ್ರ ಅವರ ಸಹಕಾರವನ್ನು ಶಾಲಾ ಆಡಳಿತ ಮಂಡಳಿ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು.

            ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ, ಫೀರೋಜ ಖಾದ್ರಿ, ವಿಜಯ ಬಡಿಗೇರ, ಮುದುಕಪ್ಪ ತಡಸಲೂರ, ಉಪಾಧ್ಯಕ್ಷೆ ಹಿರೇಮಠ ಮೇಡಂ, ಶಾಲೆಯ ಪ್ರಧಾನ ಗುರು ಎ. ಎ. ಮಕ್ತುಮ್ಮನವರ, ಶಿಕ್ಷಕ ಸಂಘದ ಪ್ರತಿನಿಧಿ ಎಸ್‌. ಬಿ. ಮಿಕಲಿ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ ಚೀಲದ, ರಮೇಶ ಹುಣಸಿಕಟ್ಟಿ, ಬಿ. ಎಂ. ಸರದಾರ, ವಿನಾಯಕ ತುಪ್ಪದ ಸೇರಿದಂತೆ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ