ಯರಗಟ್ಟಿ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸದಿದ್ದರೆ ಉಗ್ರ ಪ್ರತಿಭಟನೆ: ರೈತ ಸಂಘ ಎಚ್ಚರಿಕೆ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸದಿದ್ದರೆ ಉಗ್ರ ಪ್ರತಿಭಟನೆ: ರೈತ ಸಂಘ ಎಚ್ಚರಿಕೆ
Farmers' association warns of intense protest if a suitable support price for sugarcane is not annou

ಯರಗಟ್ಟಿ  24 : ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳ ನೇತೃತ್ವದಲ್ಲಿ ಅ. 27 ರಂದು ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಕಬ್ಬು ಬೆಳೆಯಲು ಅಗತ್ಯವಿರುವ ಗೊಬ್ಬರ, ಬೀಜ, ಕೂಲಿ ಕಾರ್ಮಿಕರ ವೇತನ, ನೀರಾವರಿ ಹಾಗೂ ಸಾಗಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ರೈತರಿಗೆ ಮಾತ್ರ ಅವರು ಬೆಳೆದ ಕಬ್ಬಿಗೆ ನೀರೀಕ್ಷಿತ ದರ ಸಿಗುತ್ತಿಲ್ಲ. ಇದರಿಂದ ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಜಿಲ್ಲಾ ರೈತ ಮುಖಂಡ ಸಿಂಧೂರು ತೆಗ್ಗಿ ಹೇಳಿದರು.ನಂತರ  ರೈತ ಮುಖಂಡ ರಾಮಕೃಷ್ಣ ಎಳ್ಳಮ್ಮಿ ಮಾತನಾಡಿದ ಅವರು ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಬ್ಬಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಲಾಭದಾಯಕ ದರ ನಿಗದಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವುದರ ಜೊತೆಗೆ ಬಾಕಿ ಇರುವ ಬಿಲ್‌ಗಳನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಯಕ್ಕೇರೆಪ್ಪ ತಳವಾರ, ಗಿರೇಪ್ಪ ಗಂಗರಡ್ಡಿ, ಶ್ರೀಶೈಲ ದಿಡಗನ್ನವರ, ಯಮನಪ್ಪ ಮಾಳಗಿ, ಸಿದ್ದಾರೂಢ ಭಾಂಗಿ, ಶೇಖರ ಕಿಲಾರಿ, ಯಲ್ಲಪ್ಪ ಪಟಾತ, ಮಹಾದೇವ ಯಂಡ್ರಾವಿ, ಶಾನೂರ ಶೀಕ್ಕಲಗಿ, ಯಕ್ಕೇರೆಪ್ಪ ಮಾಳಗಿ ಇದ್ದರು. 


ಸುದ್ದಿ ಓದಿ