ಯರಗಟ್ಟಿ

ದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನ

ದೇವಿ ಪುರಾಣ ಪ್ರವಚನದ ಮಂಗಲೋತ್ಸವ ಭಕ್ತಿಭಾವದಿಂದ ಸಂಪನ್ನ

ಲೋಕದರ್ಶನ ವರದಿ 

ಯರಗಟ್ಟಿ 22: ಸಮೀಪದ ರೈನಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಮಂಗಲಗೊಂಡಿತು. 

ಮಾತೋಶ್ರೀ ಪಾರ್ವತೆಮ್ಮತಾಯಿ ದೇವಿಯ ಮಹಿಮೆ, ಶಕ್ತಿ ಆರಾಧನೆಯ ಮಹತ್ವ ಹಾಗೂ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಕುರಿತು ಪ್ರವಚನದ ಮೂಲಕ ಭಕ್ತರಿಗೆ ಸಂದೇಶ ನೀಡಲಾಯಿತು. 

ಮಾತೋಶ್ರೀ ಮುದ್ದಮ್ಮತಾಯಿ ಪುರಾಣ ಮಂಗಲೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. 

ಪ್ರವಚನಕಾರ ಶ್ರೀನಿವಾಸ ಸಿದ್ನಾಳ ಮಾತನಾಡಿ, ದೇವಿ ಪುರಾಣಗಳು ಧಾರ್ಮಿಕ ಜಾಗೃತಿ ಮೂಡಿಸುವದರ ಜತೆಗೆ ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿ ಮತ್ತು ಮೌಲ್ಯಗಳ ಸಂರಕ್ಷಣೆಗೆ ಸಹಕಾರಿ ಯಾಗಿವೆ ಎಂದರು.

ಈ ವೇಳೆ ಗೋವಿಂದಪ್ಪ ಕಳ್ಳಿಗುದ್ದಿ, ಬಸಪ್ಪ ಸಿದ್ನಾಳ, ಚಂದ್ರ​‍್ಪ ತೋರಣಗಟ್ಟಿ, ಸೋಮಪ್ಪ ಗಂಗರಡ್ಡಿ, ಗೋವಿಂದಪ್ಪ ಚುಳಕಿ, ರವಿಶಂಕರ ಅಡಕಿ, ಕಲ್ಲಪ್ಪ ಕಳ್ಳಿಗುದ್ದಿ, ನಂದಗೋಪಾಲ ಕಡೇಮನಿ, ಹೇಮರಡ್ಡಿ ಸಿದ್ನಾಳ, ವಿಠ್ಠಲ ಕಳ್ಳಿಗುದ್ದಿ, ಜಗದೀಶ ಕಳ್ಳಿಗುದ್ದಿ, ವೆಂಕಣ್ಣಾ ಹುರಕನವರ, ಮಂಜಮ್ಮ ಕುಂಬಾರಗೇರಿಮಠ, ರಾಜೇಶ್ವರಿ ಹೂಗಾರ, ಶೈಲಾ ವಾಲಿ, ಸಕ್ಕುಬಾಯಿ ಕುಂಬಾರ, ಬಸವೇಶ್ವರ ಭಜನಾ ಮಂಡಳಿ ಮತ್ತು ಗ್ರಾಮದ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ