ಯರಗಟ್ಟಿ

ಯರಗಟ್ಟಿಯಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ಯರಗಟ್ಟಿಯಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ಲೋಕದರ್ಶನ ವರದಿ 

ಯರಗಟ್ಟಿ 17: ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸ್ವಂದಿಸುವ ಕೆಲಸವಾಗಬೇಕು. ಅದಕ್ಕಾಗಿಯೇ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರಕಾರಿ ಕಚೇರಿಗಳಿಗೆ ಪದೇ ಪದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೆಳಿದರು. 


ತಾಲೂಕಿನ ಯರಝರ್ವಿ ಗ್ರಾಮದ ದ್ಯಾಮಮ್ಮದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಶನಿವಾರ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಬಳಿಗೆ ಸರ್ಕಾರದ ಯೋಜನೆ ಕಾರ್ಯಕ್ರಮಗಳು ತಲುಪಬೇಕು ಎಂದು ಹೇಳಿದರು.


ತಹಶೀಲ್ದಾರ ಎಂ.ವ್ಹಿ ಗುಂಡಪ್ಪಗೋಳ ಮಾತನಾಡಿ, ಸರಕಾರ ಜನ ಸೇವಾ ಅಭಿಯಾನ ಹಮ್ಮಿಕೊಂಡಿದ್ದು, ಜನರ ಕಣ್ಣಿರುವರೆಸುವ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ಕರ್ಯಾಂಗ ಮತ್ತು ಶಾಸಕಾಂಗ ಜೋತೆಯಾಗಿ ಕೆಲದ ಮಾಡಬೇಕು. ಆನಪರ ಹಾಗೂ ಬಡವರ ಪರವಾಗಿ ಸ್ವಲ್ಪವದರು ಸ್ವಾರ್ತಬಿಟ್ಟು ಸಮಾಜ ಮುಖಿಯಾಗಿ ಯೋಚಿಸಬೇಕು ಎಂದರು. 


ತಾ.ಪಂ. ಇಓ ಬಸವರಾಜ ಅಯ್ಯನಗೌಡರ, ಸವದತ್ತಿ ತಾ.ಪಂ. ಇಓ ಆನಂದ ಬಡಕುಂದ್ರಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಹೇಸ್ಕಾಂ ಎಇಇ ಮಹೇಂದ್ರ ವಿಶಾಪೂಕರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್‌.ಆರ್ ಕುಲಕರ್ಣಿ, ಕೃಷಿ ಇಲಾಖೆ ಅಧಿಕಾರಿ ಶಿವಪ್ರಕಾಶ ಪಾಟೀಲ, ಲೋಕೋಪಯೋಗಿ ಇಲಾಖೆ ಎಇಇ ವಿಜಯ ಸಂಗಪ್ಪಗೋಳ, ಗ್ರಾಪಂ. ಆಡಳಿತಾಧಿಕಾರಿ ಶಿವಕುಮಾರ ಎಚ್, ಪಶು ವೈದ್ಯಾಧಿಕಾರಿ ಡಾ. ಎಮ್‌.ವ್ಹಿ ಪಾಟೀಲ, ಆಹಾರ ಇಲಾಖೆ ಅಧಿಕಾರಿ ಸುನಿಲ ಕತ್ತಿ,


ಕೆಎಸ್‌ಆರ್‌ಟಿಸಿ ಅಧಿಕಾರಿ ಅರುಣ ಕೆ, ಅಬಕಾರಿ ಸಿಪಿಐ ದಾವಲಸಾಬ ಸಿಂಧೋಗಿ, ಸಿಡಿಒ ಅಮೃತ ಸಾನಿಕೋಪ್ಪ, ತಾಲೂಕಾ ವೈದ್ಯಾಧಿಕಾರಿ ಶ್ರೀಪಾದ ಸಬ್ನಿಸ್, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಆರ್‌.ಎಲ್‌. ಕದಂ, ಬಿಇಓ ಎ.ಎ ಖಾಜಿ, ಶಿಕ್ಷಣ ಸಂಯೋಜಕ ಎಂ.ಬಿ. ಕಡಕೋಳ, ಸಿಆರ್‌ಪಿ ಸೋಮೇಶ ಪೂಜೇರ, ಹೇಸ್ಕಾಂ ಎಸ್‌.ಓ ಮಹಾಂತೇಶ ಯರಗಟ್ಟಿ, ಆಸೀಪ್ ನದಾಫ, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 


ಸುದ್ದಿ ಓದಿ