ಕಂಪ್ಲಿ

ಜನರು ಆರೋಗ್ಯ ಕಡೆಗೆ ಹೆಚ್ಚಿನ ಗಮನ ಕೊಡಿ : ಎನ್‌.ಕರಿಬಸವ

ಜನರು ಆರೋಗ್ಯ ಕಡೆಗೆ ಹೆಚ್ಚಿನ ಗಮನ ಕೊಡಿ : ಎನ್‌.ಕರಿಬಸವ

ಲೋಕದರ್ಶನ ವರದಿ 

ಕಂಪ್ಲಿ 17:  ಎಚ್‌ಐವಿ ಏಡ್ಸ್‌ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಸುತ್ತಿದವೇ ಎಂದು ಕುರುಗೋಡು ಸಮುದಾಯ ಅರೋಗ್ಯ ಕೇದ್ರದ ಆಪ್ತ ಸಮಲೋಚಕ ಎನ್‌.ಕರಿಬಸವ  ಹೇಳಿದರು. ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರದ ಪುನಿತ್ ರಾಜಕುಮಾರ ಬಸ್ ನಿಲ್ದಾಣದಲ್ಲಿ ಜಿಲ್ಲಾ ಎಚ್‌ಐವಿ ಏಡ್ಸ್‌ ನಿಯತ್ರಂಣ ಘಟಕ ಬಳ್ಳಾರಿ ಮತ್ತು ಕುರುಗೂಡು ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ  ಎಚ್‌ಐವಿ/ ಎಸ್‌ಟಿಐ ಪರೀಕ್ಷ ಆಪ್ತಸಮಾಲೋಚನ ಚಿಕಿತ್ಸೆ ಸೇವಾ ಸೌಲಭ್ಯಗಳ ಮಾಹಿತಿ ಮತ್ತು ಮೊಬೈಲ್ ಸ್ಟೇಷನ್ ಫಾರಂ ಏಡ್ಸ್‌ ಸುರಕ್ಷಾ ಅಭಿಯಾನದಲ್ಲಿ ಮಾತನಾಡಿ ಇತ್ತೀಚಿನ ದಿನಮಾನದಲ್ಲಿ ಆರೋಗ್ಯಗಳು ನಾನಾ ಕಾರಣದಿಂದಾಗಿ ಕ್ಷೀಣಿಸುತ್ತಿರುವುದು ವಿಪರ್ಯಾಸವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ರೋಗಕ್ಕೂ ಓಷಧಿಗಳಿವೆ. ಆದ್ದರಿಂದ ಜನರು ಹೆಚ್ಚಿನ ಮಟ್ಟದಲ್ಲಿ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು. ಹೊಸ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ ಸೇರಿದಂತೆ ನಾನಾ ಕಡೆಗಳಲ್ಲಿ ಏಡ್ಸ್‌ ಜಾಗೃತಿ ಮೂಡಿಸಲಾಯಿತು.  ಈ ಸಂದರ್ಭದಲ್ಲಿ  ಮೈಗ್ರ್ಯಾಂಟ್ ಎನ್‌ಜಿಒ ಆನಂದ, ರೇಖಾ, ಮುಖಂಡರಾದ ಈಶಪ್ಪ, ಇಸ್ಮಾಯಿಲ್, ತಿಪ್ಪೇಸ್ವಾಮಿ, ಗೌಸ್, ವಿರುಪಾಕ್ಷಿ, ಚಾಂದಬಾಷಾ ಸೇರಿದಂತೆ ಇತರರು ಇದ್ದರು.   


ಸುದ್ದಿ ಓದಿ