ಕಾಗವಾಡ

ಕಾಗವಾಡದಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ

ಕಾಗವಾಡದಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ


ಕಾಗವಾಡ 17: ತಾಲೂಕಿನ ರೈತರು ಕರ್ನಾಟಕ ರೈತ ಸಂಘಟನೆ, ಹಸಿರು ಸೇನೆ, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ವಕೀಲರ ಸಂಘದ ವತಿಯಿಂದ ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ, ಹುಬ್ಬಳ್ಳಿಗೆ ಪಾದಾಯಾತ್ರೆ ಹೊರಟಿರುವ ರೈತರಿಗೆ ಬೆಂಬಲ ಸೂಚಿಸಲು ಪಟ್ಟಣದ ಚೆನ್ನಮ್ಮಾ ವೃತ್ದಲ್ಲಿ ರಸ್ತೆ ತಡೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಹಿಂಪಡೆದಿದ್ದಾರೆ. ಈ ವೇಳೆ ರೈತ ಮುಖಂಡ ರಾಹುಲ ಕಟಗೇರಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈತರನ್ನು ದೆಹಲಿಗೆ ಕರೆಸಿ, ಪೊಳ್ಳು ಭರವಸೆ ನೀಡಿ, ರೈತರನ್ನು ವಂಚಿಸಿದ್ದಾರೆ.


ರೈತರು ಕಳೆದ ನಾಲ್ಕೈದು ದಿನಗಳಿಂದ ರಸ್ತೆಯ ಮೇಲೆ ಇದ್ದರೂ ಸಹ ಸರ್ಕಾರ ರೈತರ ಬಗ್ಗೆ ಅಸಡ್ಡೆತನ ತೋರುತ್ತಿದೆ. ಪ್ರತಿ ಟನ್ ಕಬ್ಬಿಗೆ 5500 ನೀಡಬೇಕು. ಸಕ್ಕರೆ ಎಂಎಸ್ಪಿ ದರ 60 ರೂಪಾಯಿ ಮಾಡಬೇಕು. ಇಥೆನಾಲ್ ಶೇಕಡಾ 100 ರಷ್ಟು ಖರೀದಿ ಮಾಡಬೇಕು. ಅಲ್ಲಿಯವರೆಗೆ ಈ ಹೋರಾಟ ನಡೆಯಲಿದೆ. ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗೂರುಜಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ಕಾಗವಾಡ ತಾಲೂಕಿನ ರೈತರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಸರ್ಕಾರ ಮೊಂಡುತನ ಬಿಟ್ಟು ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿಬೇಕು. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.


ಈ ವೇಳೆ ಸ್ಥಳಕ್ಕಾಗಮಿಸಿದ ತಹಶಿಲ್ದಾರ ರವಿಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿ, ಹೋರಾಟ ಕೈ ಬೀಡಲಾಯಿತು. ಸುಮಾರು ಎರಡು ಘಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪಿಎಸ್‌ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ ಬೀಗಿ ಪೋಲಿಸರು ಬಂದೋಬಸ್ತ ಕೈಗೊಂಡಿದ್ದರು. ಈ ವೇಳೆ ರೈತ ಸಂಘದ ಅಧ್ಯಕ್ಷ ಶರದ ಪಾಟೀಲ, ಉಪಾಧ್ಯಕ್ಷ ನಾನಸಾಬ ಶಿರಗೂರೆ, ವಿನಾಯಕ ಕಾಂಬಳೆ, ಮಹಾದೇವ ಉದಗಾಂವೆ, ಕಾಕಾ ಪಾಟೀಲ, ಸುರೇಶ ಚೌಗಲಾ, ಪ್ರಮೋದ ಪೂಜಾರಿ, ರಮೇಶ ಚೌಗಲಾ, ವೀರಭದ್ರ ಕಟಗೇರಿ ಸೇರಿದಂತೆ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ