ಬೂದು ಬೆರಗಿನಲ್ಲಿ ತೇಜಸ್ವಿನಿಯ ತೇಜೋಮಯ ಸಿಂಗಾರ!
ವಿಜಯಪುರ 17 : ಬೂದು ಬೆರಗು ತೇಜು ಮೆರುಗು ಬೂದು ಬಣ್ಣ ಮೃದುವಾದ ಮೇಲ್ಮೈ ಪದರದ ಸವ್ಯಸಾಚಿ ಲೇಪನ ಹೊಂದಿದೆ. ಸೃಜನತೆ, ಸೂಜನತೆ ಸೃಜೀಸುವ ಭಾವಾಂಶ ಈ ಬಣ್ಣಕ್ಕಿದೆ. ನವಭಾಷ್ಪದ ಆರಂಭಕ್ಕೆ ಮುನ್ನುಡಿ ರಂಗು ಬೆರೆಸುವ ಸೌಂದರ್ಯದ ಸ್ಮಾರ್ಟ್ ಕಾವ್ಯವೂ ಬೂದು ವರ್ಣ ತಾಳಿದೆ. ಈ ನವನೀತ ಬಣ್ಣದ ಉಡುಪು, ವಯ್ಯಾರದ ಸಿಂಗಾರ ಇಲ್ಲಿ ಮೇಳೈಸಿದೆ. ನವರಾತ್ರಿ ಏಳನೇ ದಿನ ಶನಿವಾರ ಬೂದು ಬಣ್ಣದ ಮುದದಲ್ಲಿ ಗುಮ್ಮಟ ನಗರಿ ವಿಜಯಪುರ ರಾಜಾಜಿ ನಗರದ ಕುವರಿ ತೇಜಸ್ವಿನಿ ಅವಟಿ ಬೂದು ಬಣ್ಣದ ಬೆಡಗಿನಲ್ಲಿ ಬೋಲ್ಟ್, ಗೋಲ್ಡ್, ಹೋಲ್ಡ್ ಅಗಿ ಬ್ಯೂಟಿಫುಲ್ ರಂಗೀನಲ್ಲಿ ನವರಾತ್ರಿ ಭಾವ ರಂಗೊಳಿಸಿಕೊಂಡಿದ್ದಾಳೆ. ಬೂದು ಬಣ್ಣದ ಸೀರೆಯನ್ನುಟ್ಟು ಬೀರಿದ ಸೌಂದರ್ಯ ಪ್ರಜ್ಞೆಯ ಸಂಸ್ಕೃತಿ, ಒನಪು ವಯ್ಯಾರದ ಮನೋಜ್ಞ ಭಾವಾವರಣ ನೋಟ ಕಂಡಿದ್ದು ಹೀಗೆ