ವಿಜಯಪುರ

ವಿಜಯಪುರದಲ್ಲಿ ರಸ್ತೆ ಕಾಮಗಾರಿ ವಿಳಂಬ: ಆಮ್ ಆದ್ಮಿ ಪಕ್ಷದಿಂದ ವಾರದ ಗಡುವು

ವಿಜಯಪುರದಲ್ಲಿ ರಸ್ತೆ ಕಾಮಗಾರಿ ವಿಳಂಬ: ಆಮ್ ಆದ್ಮಿ ಪಕ್ಷದಿಂದ ವಾರದ ಗಡುವು


ವಿಜಯಪುರ 17: ನಗರದ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್ವರೆಗಿನ ರಸ್ತೆಯ ಒಂದು ಬದಿಯನ್ನು ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಗುಂಡಿ ತೋಡಿ ಸಂಪೂರ್ಣ ಬಂದ್ ಮಾಡಿ ಸುಮಾರು ಮೂರು ತಿಂಗಳು ಕಳೆದಿದ್ದರೂ, ಸಮಸ್ಯೆಗೆ ಪರಿಹಾರ ಕಲ್ಪಿಸದ ವಿಜಯಪುರ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಆಮ್ ಆದ್ಮಿ ಪಾರ್ಟಿ ವಿಜಯಪುರ ತೀವ್ರವಾಗಿ ಖಂಡಿಸಿದೆ.


ಆಮ್ ಆದ್ಮಿ ಪಾರ್ಟಿ ವಿಜಯಪುರದ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು.


ರಸ್ತೆಯ ಒಂದು ಬದಿ ದೀರ್ಘಕಾಲದಿಂದ ಬಂದ ಆಗಿರುವುದರಿಂದ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಜನರ ಅನುಕೂಲಕ್ಕಾಗಿ ನಡೆಯಬೇಕೇ ಹೊರತು, ಸಾರ್ವಜನಿಕರಿಗೆ ಅನಗತ್ಯ ಸಂಕಷ್ಟ ಉಂಟುಮಾಡುವಂತಿರಬಾರದು.


ಕಾಮಗಾರಿ ಆರಂಭಿಸಿದ ನಂತರ ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ನಗರ ಶಾಸಕರು, ಪಾಲಿಕೆ ಮೇಯರ್, ಸ್ಥಳೀಯ ವಾರ್ಡ್‌ ಮೆಂಬರ ಗಳು ಏನು ಮಾಡುತ್ತಿದ್ದಾರೆ. 


ಸುದ್ದಿ ಓದಿ