ಶಿಗ್ಗಾವ್

ದುಷ್ಟ ಸರ್ಕಾರ ?ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ : ಬೊಮ್ಮಾಯಿ

ದುಷ್ಟ ಸರ್ಕಾರ ?ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ : ಬೊಮ್ಮಾಯಿ

 


ಶಿಗ್ಗಾವಿ 17 : ರಾಜ್ಯದಲ್ಲಿ ? ತೀವ್ರವಾದ ಭೀಕರ ಬರಗಾಲ ಇದೆ. ?ಸುಮಾರು 40 ವರ್ಷದಲ್ಲಿ ಇಷ್ಟು ದೊಡ್ಡ ಬರಗಾಲ ಆಗಿದೆ. ?ಈಗ ನೀವು ಓಣ ಬರಗಾಲ ಇದೆ, ಹಸಿ ಬರಗಾಲ ಇದೆ ಎರಡು ಬಾರಿ ರೈತರು ಬಿತ್ತನೆಯನ್ನ ಮಾಡಿ ಕೈ ಸುಟ್ಟುಕೊಂಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.   

ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ಮನೆಯ ಸಭಾಭವನದಲ್ಲಿ ಮಾತನಾಡಿದ ಅವರು ಕುಡಿಯೋಕೆ ನೀರಿಲ್ಲ, ದನಗಳಿಗೆ ಕುಡಿಯೋಕೆ ನೀರಿಲ್ಲ, ಮೇವು ಇಲ್ಲ, ಕೈಗೆ ಕೆಲಸ ಇಲ್ಲ ದುಡಿಯೋಕೆ ಹೋಗ್ತಾ ಇದ್ದಾರೆ. ?ಬಹಳ ಒಂದು ರೀತಿಯಲ್ಲಿ ಸೋಚನೀಯ ಪರಿಸ್ಥಿತಿ ಇವತ್ತು ಗ್ರಾಮೀಣ ಪ್ರದೇಶದಲ್ಲಿ ನಾವು ನೋಡುತ್ತಿದ್ದೇವೆ. ಆದರೆ, ಈ ದುಷ್ಟ ಸರ್ಕಾರ ?ಒಂದು ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್ ಆರ್ ಮಾಡುವುದು ನಕಲಿ ಮತದಾರರು ಹಾಗೂ ನಿಧನ ಹೊಂದಿದವರ ಹೆಸರುಗಳನ್ನು ಕಿತ್ತು ಹಾಕಿ ವ್ಯವಸ್ಥೆಯನ್ನು ಸ್ವಚ್ಚ ಮಾಡುವುದು.? ಇದೊಂದು ರೀತಿ ಮನೆಯ ಕಸ ಸ್ವಚ್ಛ ಮಾಡಿದಂತೆ. ಆದರೆ, ಕಾಂಗ್ರೆಸ್ ನವರು ಕಸ ಹಾಗೇ ಇರಲಿ ಎನ್ನುತ್ತಾರೆ. ಮತ್ತೆ ಬಡವರ ಪಕ್ಷ ಅಂತ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಎಸ್‌.ಕೆ ಅಕ್ಕಿ, ಗುಡ್ಡನಗೌಡ ನಿಂಬನಗೌಡ್ರಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಯುವ ಮುಖಂಡ ಭರತ ಬೊಮ್ಮಾಯಿ, ಮಾಜಿ ಶಾಸಕ ಶಿವರಾಜ ಸಜ್ಜನ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ