ಸಂವಿಧಾನ ನುಂಗಲಿಕ್ಕೆ ಭಾಜಪ, ಆರ್.ಎಸ್.ಎಸ್ ಹೊರಟಿದೆ : ಬಿ.ಕೆ.ಹರಿಪ್ರಸಾದ
ಲೋಕದರ್ಶನ ವರದಿ
ಶಿಗ್ಗಾವಿ 17: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯುನ್ನತ ಗೌರವವಿದೆ ಅಂತಹ ಸಂವಿಧಾನವನ್ನು ನುಂಗಲಿಕ್ಕೆ ಇಂದು ಭಾರತೀಯ ಜನತಾ ಪಕ್ಷ ಹಾಗೂ ಆರ್.ಎಸ್.ಎಸ್ ಹೊರಟಿದೆ ಎಂದು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ಕಿಡಿ ಕಾರಿದರು. ಬಂಕಾಪೂರ ಹೊರವಲಯದ ಖಾಸಗಿ ಹೋಟೆಲನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಪೂರ್ವಜರು ನಮಗೆ ಸಮೃದ್ದ ಭಾರತ ದೇಶ ಬಿಟ್ಟು ಕೊಟ್ಟು ಹೋಗಿದ್ದಾರೆ.
ಅದನ್ನು ಉಳಿಸಿಕೊಂಡು ಹೋಗುವುದು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಆದರೆ ಭಾಜಪ ಪಕ್ಷದವರು ಕೋಮು ದ್ವೇಷದಿಂದ ತ್ರಿಶಂಕು ವಾತಾವರಣವನ್ನು ಸೃಷ್ಟಿಸಿ ಪ್ರಜೆಗಳು ಭಯದ ವಾತಾವರಣದಲ್ಲಿ ಜೀವನ ನಿರ್ವಹಿಸುವ ಹಾಗೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ತ್ರೀವಣ ಧ್ವಜವನ್ನು ಮಕ್ಕಳು ತೆಗೆದುಕೊಂಡು ಹೋದರೆ ಅವರ ಮೇಲೆ ಕೇಸ ಹಾಕತ್ತಾರೆ ಅದು ಅವರ ದೇಶ ಭಕ್ತಿ ಎನ್ನುತ್ತಾರೆ.
ಶಿಗ್ಗಾವಿ ಮಾಜಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಅವರು ಭಾಜಪ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ ನೇತೃತ್ವದಲ್ಲಿ ಸೇರೆ್ಡಯಾದರು. ಜಿಲ್ಲಾ ಕೆ.ಪಿ.ಸಿ.ಸಿ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ರಾಜ್ಯ ಮಹಿಳಾ ಕಾರ್ಯದರ್ಶಿ ಪ್ರೇಮಾ ಪಾಟೀಲ, ಮುನ್ನಾ ಪಠಾಣ,
ಶಿಗ್ಗಾವಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಸವಣೂರ ಬ್ಲಾಕ್ ಅಧ್ಯಕ್ಷ ರಮೇಶ ಹರಿಜನ, ಜಿಲ್ಲಾ ಕೆ.ಡಿ.ಪಿ ಸದಸ್ಯ ಶಂಭು ಆಜೂರ, ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಬಸವರಾಜ ರಾಗಿ, ಮಂಜುನಾಥ ತಿಮ್ಮಾಪೂರ, ಅಣ್ಣಪ್ಪ ಲಮಾಣಿ, ಆಶೀಫ್ ಕಣವಿ, ಜಾವೀದ ನೀರಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಮಹಾಂತೇಶ ಸಾಲಿ ಕಾರ್ಯಕ್ರಮ ನಿರ್ವಹಿಸಿದರು.