ಶಿಗ್ಗಾವ್

ಸಿ.ಎಂ. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ : ಭರತ

ಸಿ.ಎಂ. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ : ಭರತ


  

ಲೋಕದರ್ಶನ ವರದಿ 

ಶಿಗ್ಗಾವಿ17:  ಸಿ.ಎಂ. ಡಿ.ಕೆ.ಶಿವಕುಮಾರ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರ ಜತೆಗೆ ಪಾಲ್ಗೊಂಡು ಸಮಯ ವ್ಯರ್ಥ ಮಾಡುವ ಬದಲು ರಾಜ್ಯದ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುರೈತರು ಕಬ್ಬು ಬೆಳೆಗೆ ದರ ಸೇರಿದಂತೆ ಇತರೆ ಬೇಡಿಕೆಗೆ ಪರಿಹಾರ ಕೇಳುವುದರಲ್ಲಿ ತಪ್ಪಿಲ್ಲ. ಕಾನೂನಾತ್ಮಕ ಸಮಸ್ಯೆ ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸಲು ಸಚಿವ ಪ್ರಲಾದ ಜೋಶಿ ಮುತುವರ್ಜಿಯಿಂದ ತಜ್ಞರ ಜಂಟಿ ಸಮಿತಿ ರಚನೆಯಾಗಿದೆ. ಶೀಘ್ರದಲ್ಲಿ ರೈತರಿಗೆ ಸಿಹಿ ಸುದ್ದಿ ಸಿಗಲಿದೆ ಹಾಗೂ ಕೇಂದ್ರ ಸರಕಾರ ತನ್ನ ಜವಾಬ್ದಾರಿ ಸಮರ​‍್ಕವಾಗಿ ನಿರ್ವಹಿಸುತ್ತಿದೆ.

ಆದರೆ, ಕಬ್ಬು ಬೆಳೆಗಾರರ ಸಮಸ್ಯೆಗೆ ತನ್ನ ಪಾಲಿನ ಪರಿಹಾರ ಕಲ್ಪಿಸುವಲ್ಲಿ ವಿಫಲವಾದ ರಾಜ್ಯ ಸರಕಾರ, ರೈತರ ಹೋರಾಟ ತಮಗೆ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಿದೆ ಎಂದು ದೂರಿದರು. ಕಬ್ಬಿನಿಂದ ಸಕ್ಕರೆ ಹಾಗೂ ಅದರ ಉಪ ಉತ್ಪನ್ನಗಳಿಂದ ಸಾವಿರಾರು ಕೋಟಿ ಜಿಎಸ್ಟಿ ಬರಲಿದೆ. ಹೀಗಾಗಿ ರಾಜ್ಯ ಸರಕಾರ ಎಸ್‌ಎಪಿ ಕಾನೂನಿನ್ವಯ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.ರೈತರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರದ ಜೊತೆಗೆ ರಾಜ್ಯ ಸರಕಾರದ ಪಾತ್ರವೂ ಬಹು ಮುಖ್ಯ. ತೂಕ, ರಿಕವರಿಯಲ್ಲಿ ಸಮಸ್ಯೆಗಳಿವೆ.

ಇದನ್ನೆಲ್ಲ ರಾಜ್ಯ ಸರಕಾರ ಸರಿಪಡಿಸಬೇಕಿದ್ದು, ಇದರ ಬಗ್ಗೆ ಕಿಂಚಿತ್ತೂ ಚಿಂತನೆ ಮಾಡದ ಕಾಂಗ್ರೆಸ್ ಸರಕಾರ ರೈತ ವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ನರಹರಿ ಕಟ್ಟಿ, ಕರೆಪ್ಪ ಕಟ್ಟಿಮನಿ, ಡಾ.ಮಲ್ಲೇಶಪ್ಪ ಹರಿಜನ, ಗಂಗಾಧರ ಬಾಣದ, ಸಚಿನ್ ಮಡಿವಾಳರ, ಅನಿಲ ಸಾತಣ್ಣವರ, ವಿವೇಕ ರಾಮಗೇರಿ, ಪ್ರಶಾಂತ ಬಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ