ಚರಂಡಿ ನೀರಿನಿಂದ ರಸ್ತೆಗಳು ಅಸ್ವಚ್ಛ: ತಕ್ಷಣ ಕ್ರಮಕ್ಕೆ ಒತ್ತಾಯ
ನೇಸರಗಿ 17: ಇಲ್ಲಿನ ಪ್ರಮುಖ ಬೀದಿಗಳ ಚರಂಡಿಗಳು ತುಂಬಿಕೊಂಡು, ಚರಂಡಿ ನೀರು ರಸ್ತೆ ಮೇಲೆ ಹರಿದು, ದುರ್ವಾಸಣೆ ಬಂದು ಮಕ್ಕಳ, ಗ್ರಾಮಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಹೊಂದಿ, ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಈಗ ಪ್ರಸಕ್ತ ಜನಪ್ರತಿನಿದಿನಗಳು ಇಲ್ಲದ ಸಮಯದಲ್ಲಿ ಅಧಿಕಾರಿಗಳು, ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಸಾರ್ವಜನಿಕರು ಗಟ್ಟಾರು ಸ್ವಚ್ಛ ಮಾಡಲು ಮನವಿ ಮಾಡಿದರು ಅಧಿಕಾರಿಗಳು ಸ್ವಚ್ಛತೆಗೆ ಕ್ರಮ ತೆಗೆದುಕೊಂಡಿಲ್ಲ, ಸೋಮಣ್ಣವರ ಬಿದಿಯಿಂದ ಕರ್ನಾಟಕ ಚೌಕದವರೆಗೆ ಸಂಪೂರ್ಣ ಚರಂಡಿ ತುಂಬಿದ್ದು, ಇನ್ನೂ ಮುಂದಾದರು ತಕ್ಷಣ ಸ್ವಚ್ಛಗೊಳಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವದೆಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.