ಇನ್ನರ್ ವೀಲ್ ಕ್ಲಬ್ ವತಿಯಿಂದ ಕಿನ್ನಾಳ ಗ್ರಾಮ ದಲ್ಲಿ ಆಲ್ಝೈಮರ್ ಜಾಗೃತಿ ಕಾರ್ಯಕ್ರಮ
ಕೊಪ್ಪಳ 17: ಇನ್ನರ್ ವೀಲ್ ಕ್ಲಬ್ ಕೊಪ್ಪಳ ವತಿಯಿಂದ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಆಲ್ಝೈಮರ್ ಕಾಯಿಲೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಫಿಸಿಯೋಥೆರಪಿಸ್ಟ್ ಡಾ, ಚೈತ್ರ ಅವರು ಆಲ್ಝೈಮರ್ ಕಾಯಿಲೆಯ ಆರಂಭಿಕ ಲಕ್ಷಣಗಳು, ಕಾರಣಗಳು, ಹಂತಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು. ವಯಸ್ಸಾದಂತೆ ಮರೆವು ಹೆಚ್ಚಾಗುವುದು ಸಹಜ ಎಂಬ ತಪ್ಪು ಕಲ್ಪನೆಯನ್ನು ತೊರೆದು, ಸಮಯಕ್ಕೆ ಸರಿಯಾಗಿ ರೋಗವನ್ನು ಗುರುತಿಸಿದರೆ ಉತ್ತಮ ಆರೈಕೆ ನೀಡಬಹುದು ಎಂದು ಅವರು ತಿಳಿಸಿದರು.ಮುಂದುವರೆದು ಮಾತನಾಡಿನಿತ್ಯ ವ್ಯಾಯಾಮ, ಯೋಗ, ಸಮತೋಲಿತ ಆಹಾರ, ನೆನಪಿನ ಶಕ್ತಿ ಹೆಚ್ಚಿಸುವ ಚಟುವಟಿಕೆಗಳು, ಸಾಮಾಜಿಕವಾಗಿ ಬೆರೆಯುವುದು ಮತ್ತು ಫಿಸಿಯೋಥೆರಪಿ ಮೂಲಕ ರೋಗಿಗಳ ಚಲನಶೀಲತೆ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.ಆರೈಕೆ ಮಾಡುವವರ ಪಾತ್ರ, ರೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸುವುದು ಮತ್ತು ಅವರಿಗೆ ಗೌರವಯುತ ಜೀವನ ನೀಡುವುದು ಮುಖ್ಯ ಎಂದು ಡಾಕ್ಟರ್ ಚೈತ್ರ ತಿಳಿಸಿದರು ಕಿನ್ನಾಳದ ಕಲಾವಿದರು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದರು.ಈ ಸರಳ ಸಾಂಕೇತಿಕ ಸಮಾರಂಭದ ಅಧ್ಯಕ್ಷತೆ ಕೊಪ್ಪಳ ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ವಹಿಸಿದ್ದರು,ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಶ್ರೀದೇವಿ ಪಾಟಿಲ್ ಎಡಿಟರ್ ಮಾಲಾ ಕಂಚಿ ,ಐ ಎಸ್ ಓ ಲತಾ ಪಟ್ಟಣಶೆಟ್ಟಿ ,ಹಿರಿಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಕೋಮಲಾ ಕುದುರೆಮೋತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,