ರಾಷ್ಟ್ರೀಯ

ಬಿಹಾರ: ರೈಲು ಡಿಕ್ಕಿಯಾಗಿ ಮೂರು ವರ್ಷದ ಬಾಲಕ ಸಾವು, ಇಬ್ಬರು ಮಕ್ಕಳಿಗೆ ಗಾಯ

ಬಿಹಾರ: ರೈಲು ಡಿಕ್ಕಿಯಾಗಿ ಮೂರು ವರ್ಷದ ಬಾಲಕ ಸಾವು, ಇಬ್ಬರು ಮಕ್ಕಳಿಗೆ ಗಾಯ

ಛಾಪ್ರಾ, ಅ. 17 : ಬಿಹಾರದ ಸರಣ್ ಜಿಲ್ಲೆಯಲ್ಲಿ ಛಾಪ್ರಾ ಕಚೇರಿ–ಮಶ್ರಖ್ ರೈಲು ಮಾರ್ಗದ ತೆಢಾ ಹಾಲ್ಟ್ ನಿಲ್ದಾಣದ ಸಮೀಪ ಶನಿವಾರ ಬೆಳಿಗ್ಗೆ ರೈಲು ಡಿಕ್ಕಿಯಾಗಿ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಇತರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಮರ್ಹೌರಾದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳ ಪ್ರಕಾರ, ಮೃತ ಬಾಲಕನನ್ನು ತೆಢಾ ಗ್ರಾಮದ ನಿವಾಸಿ ಪವನ್ ಕುಮಾರ್ ಅವರ ಪುತ್ರ ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ.

ಪ್ರೇಮ್ ಕುಮಾರ್ ಇತರ ಇಬ್ಬರು ಮಕ್ಕಳೊಂದಿಗೆ ರೈಲು ಹಳಿಗಳ ಬಳಿ ಆಟವಾಡುತ್ತಿದ್ದಾಗ ಗೋರಖ್‌ಪುರ–ಪಾಟಲಿಪುತ್ರ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರೇಮ್ ಕುಮಾರ್ ಮೃತಪಟ್ಟಿದ್ದು, ಉಳಿದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ಲಭಿಸಿದ ತಕ್ಷಣ ಜಿಆರ್‌ಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಿದರು. ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ಓದಿ