ಶಕ್ತಿದೇವಿ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದ ನಾಡಹಬ್ಬ ಆಚರಣೆ
ಸವದತ್ತಿ 17: ನಗರದ ರಾಮಾಪೂರಸೈಟ್ ಗಾಣಿಗೇರ ಒಣಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಶಕ್ತಿದೇವಿ ಬಣ್ಣಿ ಗಿಡಕ್ಕೆ ಮಹಿಳೆಯರು ಬೆಳಿಗ್ಗೆಯೇ ಭಕ್ತಿ-ಭಾವದಿಂದ ವಿಶೇಷ ಪೂಜೆ ಸಲ್ಲಿಸಿ, ನಾಡಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿದ್ದಮ್ಮ ಅಮೋಘಿಮಠ, ಮಾತನಾಡಿದ ಅವರು ನವರಾತ್ರಿ ಹಬ್ಬದ ಪ್ರಯುಕ್ತ ಅಕ್ಟೋಬರ್ 11 ರಿಂದ ಸ್ಥಳೀಯ ಮಹಿಳೆಯರಿಂದ ಶಕ್ತಿ ದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಸಡಗರ ಮತ್ತು ಭಕ್ತಿಭಾವದಿಂದ ಜರುಗುತ್ತಿವೆ.
ಅಕ್ಟೋಬರ್ 11 ರಿಂದ ಅಕ್ಟೋಬರ್ 19 ರ ವರೆಗೆ ಒಟ್ಟು 9 ದಿನಗಳ ಕಾಲ ಈ ಧಾರ್ಮಿಕ ಉತ್ಸವವು ನಡೆಯಲಿದ್ದು, ಪ್ರತಿದಿನ ಸಂಜೆ ಸ್ಥಳೀಯ ಮಹಿಳೆಯರು ಒಟ್ಟಾಗಿ ಸೇರಿ ಬಣಿ ಗಿಡಕ್ಕೆ ಹಾಗೂ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಿಸುತ್ತಿದ್ದಾರೆ. ಹಬ್ಬದ ಈ ದಿನಗಳಲ್ಲಿ ಓಣಿಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ. ಶಕ್ತಿದೇವಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಊರಿಗೆ ಒಳಿತಾಗುತ್ತದೆ.
ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬೆಳೆಯಲಿ; ರೈತರು ಸುಖ ಶಾಂತಿಯಿಂದ ಇದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಅಲ್ಲದೆ, ಸಮಾಜದಲ್ಲಿ ಸಮೃದ್ಧಿ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅನ್ನದಾನಮ್ಮ ಅಮೋಗಿಮಠ, ದ್ರಾಕ್ಷಾಯಿಣಿ ದೊಡಮನಿ, ಲತಾ ಪಾಟೀಲ್, ಕಸ್ತೂರಿ ರಾಮಣ್ಣವರ, ಗಿರಿಜಾ ಬೆಟಗೇರಿ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಭಕ್ತಿಪೂರ್ವಕವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.