ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಸ್ಥಾಪನಾ ದಿನಾಚರಣೆ
ಲೋಕದರ್ಶನ ವರದಿ
ಬೆಳಗಾವಿ 17 : ನಗರದ ತಿಲಕವಾಡಿಯ ನ್ಯೂ ಉದಯ ಭವನದಲ್ಲಿ ಇದೇ ದಿ. 16 ಶುಕ್ರವಾರದಂದು ಮುಂಜಾನೆ 10 ಗಂಟೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ ಸ್ಥಾಪನಾ ದಿನಾಚರಣೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿವೃತ್ತ ಪಿಂಚಣಿದಾರರ ಸಂಘ ಬೆಳಗಾವಿ ಘಟಕದವರು ಹಮ್ಮಿಕೊಂಡಿದ್ದರು.
ಕಾರ್ಯಕ್ರಮ ಅತಿಥಿಗಳು ವೇದಿಕೆ ಮೇಲಿನ ಗಣ್ಯರು. ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಫಾರೆ್ಣ ಮಾಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 75 ವರ್ಷ ದಾಟಿದ ಮಹನಿಯರನ್ನು ಸನ್ಮಾನಿಸಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿಜಯ ಕೊಲ್ಹಪುರಿ ಮಾತನಾಡಿದರು.
ದಿ. ಸಿ.ಜಿ. ದೇಸಾಯಿ ಹಾಗೂ ದಿ. ಈರಾ್ಪ ಕಮ್ಮಾರ ಅವರನ್ನು ನೆನಪಿಸಿಕೊಂಡು ಎಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನದೊಂದಿಗೆ ಶ್ರದ್ಧಾಂಜಲಿಯನ್ನು ಅರ್ಿಸಿದರು.
ಹಾಸ್ಯಕೂಟದ ಗುಂಡೇನಟ್ಟಿ ಮಧುಕರ, ಪತ್ರಿಕಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯ ಹಾಸ್ಯ, ಪ್ರೊ. ಜಿ. ಕೆ. ಕುಲಕರ್ಣಿ ಭಾಷೆಯ ಕುರಿತಾದ ವಿನೋದ ಪ್ರಸಂಗ ಹಾಗೂ ಬ್ಯಾಂಕಿನಲ್ಲಿ ನಡೆಯು ಹಾಸ್ಯ ಪ್ರಸಂಗಗಳನ್ನು ಅರವಿಂದ ಹುನಗುಂದ ಹಾಸ್ಯಭರಿತ ಮಾತುಗಳಿಂದ ಎಲ್ಲರನ್ನು ರಂಜಿಸಿದರು. ತಾನಾಜಿ ನಿರೂಪಿಸಿದರು. ಉಮಾಶಂಕರ ಜೋಶಿ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಾನ್ಸಿಸ್ ಫರ್ನಾಂಡಿಸ್ ಸ್ವಾಗತಿಸಿದರು. ಸಿ.ಬಿ. ಪಾಟೀಲ ವಂದಿಸಿದರು.