ಬೆಳಗಾವಿ

ಗುರ್ಲಾಪೂರದಲ್ಲಿ ‘ರಾಯರ್ಸ್‌ ಕೇನ ಕೆಫೆ’ ಆರಂಭ

ಗುರ್ಲಾಪೂರದಲ್ಲಿ ‘ರಾಯರ್ಸ್‌ ಕೇನ ಕೆಫೆ’ ಆರಂಭ

ಲೋಕದರ್ಶನ ವರದಿ 

ಗುರ್ಲಾಪೂರ 17 : ಗುರ್ಲಾಪೂರದ ಬಸ್ ತಂಗುದಾನ ಹತ್ತಿರ ಮಹಾಲಿಂಗಪೂರ ಪುರಸಭೆಯ ಮಾಜಿ ಅಧ್ಯಕ್ಷರಾದ ಬಸವರಾಜ ರಾಯರ ಇವರು “ರಾಯರ‌್ಸ ಕೇನ ಕೇಫೆ” ಉದ್ಗಾಟಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಆರೋಗ್ಯವಾಗಿರಬೇಕಾದರೆ ಮೊದಲನೆ ಪದ್ದತಿಯಂತೆ ಜನರು ಬೆಲ್ಲದ ಚಹ ಸೇವಿಸುತ್ತಾರೆ ಹಾಗೆ ಈವತ್ತು ಪ್ರತಿಯೋಬ್ಬರು ಹೋಲ ಗದ್ದೆಗಳಿಗೆ ಹೋಗಿ ಕಬ್ಬು ತಿನ್ನುವ ಪ್ರವರ್ತಿಯನ್ನೆ ಹೋಂದಿದ್ದಾರೆ.

ಆದ್ದರಿಂದ ಎಲ್ಲ ಜನರು ಕಬ್ಬಿನ ಹಾಲನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೋಳ್ಳಬೇಕೆಂದು ಎಂದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಮೂಡಲಗಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷರು, ಹಾಲಿ ಖಜಾಂಚಿಯವರಾದ ಶಿವಾನಂದ ಲ ಮರಾಠೆಯವರು ಇಂದಿನ ಯುವಕರು ವಿದೇಶಿಯ ತಂಪು ಪಾನೀಯಗಳಾದ ಕೋಕೋ ಕೊಲಾ, ಪೆಪ್ಸಿಯಂತಹ ಪಾನಿಗಳನ್ನು ಕುಡಿದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೋಳ್ಳದೆ ರೈತರು ಬೇಳೆದ ಕಬ್ಬಿನ ಹಾಲು ಹಾಗೂ ಏಳನೀರು (ತೆಂಗಿನ ನೀರು) ಉತ್ತಮ ಆರೋಗ್ಯ ಕಾಪಾಡಿಕೋಳ್ಳುವುದರ ಜೋತೆಗೆ ಬರಗಾಲದ ಭಾವನೆಯನ್ನು ಎದುರಿಸುತ್ತಿರುವ ರೈತನ  ಒಳ್ಳೆಯ ಜೀವನ ರೂಪಿಸುವಲ್ಲಿ ಮುಂದಾಗಬೇಕು ಎಂದರು.

ಈ “ರಾಯರ‌್ಸ ಕೇನ ಕೇಫೆ” ಮಾಲೀಕರಾದ ಮುರುಘೇಂದ್ರ ಜಕಾತಿಯವರು ಈ ಒಂದು ಕಬ್ಬಿನ ಜ್ಯೂಸ ಕೆಫೆಯಿಂದ ಗ್ರಾಹಕರಿಗೆ ಯಾವುದೆ ರೀತಿಯ ಕೆಮಿಕಲ್ಸ ್ಘ ಐಸ್ ಬಳಸದೆ, ಕಬ್ಬನ್ನು ನೇರವಾಗಿ ಪ್ರೀಡ್ಜಲ್ಲಿ ಇಟ್ಟು ನಂತರ ಅದರಿಂದ ತೆಗೆದಂತಹ ಶುದ್ದವಾದ, ತಂಪಾದ ಕಬ್ಬಿನ ಹಾಲನ್ನು ಗ್ರಾಹಕರಿಗೆ ಬರಿ 10 ರೂಪಾಯಿಗೆ ವಿತರಿಸಲಾಗುತ್ತದೆ. ಇದರಿಂದ ಗ್ರಾಹಕರ ಆರೋಗ್ಯದ ಮೇಲೆ ಆಗುವಂತಹ ಪ್ರಯೋಜನಗಳ ಬಗ್ಗೆ ತಿಳಿಸುತ್ತಾ ಈ ಒಂದು ವೃತ್ತಿಯಲ್ಲಿ ಹೆಚ್ಚಿನ ಆದಾಯಕ್ಕೆ ಆಸೆ ಪಡದೆ ಎಲ್ಲ ಗ್ರಾಹಕರು ಆರೋಗ್ಯವಂತರಾಗಲ್ಲಿ ಎಂದರು.

“ರಾಯರ‌್ಸ ಕೇನ ಕೇಫೆ ” ಉದ್ಗಾಟನೆಯ ಸಾನಿಧ್ಯವನ್ನು ಸ್ಥಳೀಯ ವೇದ ಮೂರ್ತಿ ರುದ್ರಯ್ಯ ಹಿರೇಮಠ ವಹಿಸಿದ್ದರು ಈ ಸಂಧರ್ಬದಲ್ಲಿ ಮಹಾದೇವ ಜಕಾತಿ, ಗುರುಸಿದ್ದಯ್ಯಾ ಜಡಿ, ಜಯಪ್ರಕಾಶ ಗಾಣಿಗೇರ, ಮಹಾನಂದಾ ಜಕಾತಿ, ಸತೀಶ ಜಕಾತಿ ಪ್ರಕಾಶ ನಾವಿ, ಕರೆಪ್ಪ ಕುದರಿ, ರಮೇಶ ಮರಾಠೆ, ಈರ​‍್ಪ ನೇರ್ಲಿ, ಬೀಮಪ್ಪ ಹಳಿಂಗಳಿ, ಇನಾಮದಾರ ಶಂಕ್ರಯ್ಯ ಹಿರೇಮಠ, ಹಾಗೂ ಗ್ರಾಮದ ಗುರು-ಹಿರಿಯರು, ಗ್ರಾಹಕರು ಉಪಸ್ಥಿತರಿದ್ದರು. 


ಸುದ್ದಿ ಓದಿ