ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ವಿಜಯಪುರದ ಸಚಿನ್ ಸಾಳುಂಕೆಗೆ ಸಚಿವ ಎಂ.ಬಿ. ಪಾಟೀಲರಿಂದ ಸನ್ಮಾನ
ವಿಜಯಪುರ 18: ಕೆನಡಾದಲ್ಲಿ ಇತ್ತೀಚಿಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪವರ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಪಡೆದ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ಕ್ರೀಡಾಪಟು ಸಚೀನ ತುಕಾರಾಮ ಸಾಳುಂಕೆ ಅವರನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ರವಿವಾರ ನಗರದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.ಬಳಿಕ ಮಾತನಾಡಿದ ಅವರು, ಕ್ರೀ
ಡಾಪಟು ಸಚಿನ ತುಕಾರಾಮ ಸಾಳುಂಕೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ನಮ್ಮ ಜಿಲ್ಲೆ ಹಾಗೂ ಬಬಲೇಶ್ವರದ ಕೀರ್ತಿ ಹೆಚ್ಚಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಚಿಕ್ಕಂದಿನಿಂದಲೇ ಕ್ರೀಡಾ ಕ್ಷೇತ್ರದ ಕಡೆಗೆ ಅತೀವ ಆಸಕ್ತಿ ಹೊಂದಿರುವ ಅವರ ಕುಟುಂಬ ಸದಸ್ಯರು ಕೃಷಿಯನ್ನು ಅವಲಿಂಬಿಸಿದ್ದಾರೆ. ಅವರ ತಂದೆ ಮತ್ತು ಸಹೋದರ ಈಗಲೂ ಹೊಲದಲ್ಲಿ ಕೆಲಸ ಮಾಡುತ್ತಾರೆ. ಇಂಥ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದು,
ಒಲಂಪಿಕ್ಸ್ನಲ್ಲೂ ಭಾಗವಹಿಸಿ ಚಿನ್ನದ ಪದಕ ಪಡೆಯುವ ಅರ್ಹತೆ ಹೊಂದಿದ್ದಾರೆ. ತುಮಕೂರಯ ಸಿದ್ದಗಂಗಾ ಮಠದಲ್ಲಿ ಸಿದ್ದಗಂಗೆಯ ಉಚಿತ ಪ್ರಸಾದ ನಿಲಯದಲ್ಲಿ ಇದ್ದು ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಮುಗಿಸಿ ನಂತರ ಮೂಡಬಿದರಿಯ ಆಳ್ವಾಸ್ ಕಾಲೇಜಿನಲ್ಲಿ ಬಿ.ಎ. ಓದಿ ಈ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.ಖಾಸಗಿ ಕಂಪನಿಗಳಾದ ಟೊಯೋಟಾ ಮತ್ತು ಜಿಂದಾಲ್ನವರು ಕ್ರೀಡಾಪಟುಗಳಿಗೆ ಉದ್ಯೋಗದ ಜೊತೆಗೆ ತರಬೇತಿಗೆ ಉತ್ತೇಜನ ನೀಡುತ್ತಾರೆ.
ಇದರ ಲಾಭ ಪಡೆಯಬಹುದು ಎಂದು ಸಲಹೆ ನೀಡಿದ ಸಚಿವರು, ಕ್ರೀಡಾಪಟು ತಮ್ಮ ಇಚ್ಛೆಯಂತೆ ತಮಗಿಷ್ಠವಾದ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ಸಚೀನ ತುಕಾರಾಮ ಸಾಳುಂಕೆ 105 ಕೆಜಿ ಪುರುಷರ ವಿಭಾಗದಲ್ಲಿ ಸ್ಕಾಟ್ನಲ್ಲಿ 350 ಕೆಜಿ, ಬ್ರೆಂಚ್ ಪ್ರೆಸ್ನಲ್ಲಿ 180 ಕೆಜಿ ಹಾಗೂ ಡೆಡ್ ಲಿಫ್ಟ್ನಲ್ಲಿ 270 ಕೆಜಿ ತೂಕ ಎತ್ತಿ ದೇಶಕ್ಕೆ ಬೆಳ್ಳಿ ಪದಕ ತಂದಿದ್ದಾರೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ಮತ್ತಿತರೆಡೆ ಪವರ್ ಲಿಫ್ಟಿಂಗ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.