ವಿಜಯಪುರ

ಗ್ರಾಮೀಣ ಯುವಕರಿಗೆ ಸೈಕ್ಲಿಂಗ್ ತರಬೇತಿ ನೀಡಿದ ಹಿರಿಯ ಸಾಧಕನಿಗೆ ಸನ್ಮಾನ

ಗ್ರಾಮೀಣ ಯುವಕರಿಗೆ ಸೈಕ್ಲಿಂಗ್ ತರಬೇತಿ ನೀಡಿದ ಹಿರಿಯ ಸಾಧಕನಿಗೆ ಸನ್ಮಾನ

ಲೋಕದರ್ಶನ ವರದಿ 


ವಿಜಯಪುರ 18 : ಪ್ರಚಾರದಿಂದ ದೂರ ಇರುವ  ಎಲೆ ಮರಿ ಕಾಯಿಯಂತೆ ಸಮಾಜದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ವೃಕ್ಷಥಾನ್ ಹೆರಿಟೇಜ್ ರನ್ 2026 ರ ಕ್ರೀಡೆ, ಸ್ವಚ್ಛತೆ, ಪರಿಸರ ಹಾಗೂ ಪಾರಂಪರಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಇಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಘೋಷಿಸಿದರು. 


 ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಸಂಜೆ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ತಯಾರಿ ಪೂರ್ವಭಾವಿ ಸಭೆಯಲ್ಲಿ ತಿಳಿಸಿದ ಅವರು, ಕ್ರೀಡಾ ವಿಭಾಗದಲ್ಲಿ ವಿಶಿಷ್ಟ ಸಾಧನೆ ತೋರಿರುವ ಕೊಲ್ಹಾರದ ದುಂಡಪ್ಪ ಅಥಣಿ, ಪಾರಂಪರಿಕ ಕ್ಷೇತ್ರದಲ್ಲಿ ವಿಜಯಪುರದಲ್ಲಿ ಪ್ರೇಕ್ಷಣೀಯ ಸ್ಥಳಗಳ  ಗೈಡ್ ಆಗಿರುವ ರಮೇಶ ಹಣಮಂತ ಚವ್ಹಾಣ, ವಿವಿಧ ಸಾರ್ವಜನಿಕ ತಾಣಗಳ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ ’ಗಾನಯೋಗಿ ಸಂಘ’ ಮತ್ತು ವರ್ಷ ಪೂರ್ತಿ ಸಸಿಗಳನ್ನು ನೆಟ್ಟು, ಪೋಷಿಸುವ ’ನನ್ನ ಗಿಡ,


ನನ್ನ ಭೂಮಿ’ ತಂಡಕ್ಕೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಮತ್ತು ವಿಜಯಪುರ ಮೂಲದ ಉದ್ಯಮಿ ಸಾತವೀರ್ ರೊಟ್ಟಿ ತಮ್ಮ ಪುತ್ರರಾದ ಸುಮಂತ್ ಹಾಗೂ ವಿನಯ್ ಅವರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ನಡೆಸಿ, ಪರಿಸರ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ವಿಶೇಷ ಸಾಧಕ ಗೌರವ ನೀಡಲು ನಿರ್ಧರಿಸಲಾಗಿದೆ.   


ಸುದ್ದಿ ಓದಿ